ನನ್ನ ಸಾಲವನ್ನು ತೀರಿಸಲು ರಿಯಲ್ ಎಸ್ಟೇಟ್ ಮಹೇಶ್ ಅವರನ್ನು ಕೇಳಲು ಸಾಧ್ಯವೇ? : ಹೆಚ್. ವಿಶ್ವನಾಥ್

276
firstsuddi

ಬೆಂಗಳೂರು : ಸಾ.ರಾ ಮಹೇಶ್ ಅವರು ಹೆಚ್. ವಿಶ್ವನಾಥ್ ಅವರ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿದ್ದು, ವಿಶ್ವನಾಥ್ ಅವರಿಗೆ 28ಕೋಟಿ ರೂ ಸಾಲವಿದೆ, ಅದನ್ನು ತೀರಿಸಲು ವಿಶ್ವನಾಥ್ ಅವರು ಬಿಜೆಪಿ ನಾಯಕರಿಂದ 28ಕೋಟಿ ರೂ ಹಣವನ್ನು ಪಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಮುಂಬೈಯಿಂದ ಪ್ರತಿಕ್ರಯಿಸಿದ ಹೆಚ್. ವಿಶ್ವನಾಥ್ ಅವರು ಸಾ.ರಾ. ಮಹೇಶ್ ಅವರು ನನ್ನ ಬಗ್ಗೆ ಈ ರೀತಿ ಆರೋಪ ಮಾಡಿರುವುದು ತುಂಬಾ ನೋವಿನ ಸಂಗತಿ. ನಾನು ಚುನಾವಣೆ ವೇಳೆ ಎಲ್ಲರೂ ಸಾಲ ಮಾಡುವ ಹಾಗೆಯೇ ನಾನು ಸಾಲ ಮಾಡಿದ್ದೇನೆ. ನನಗೆ 28ಕೋಟಿ ಸಾಲ ಇದೆ. ಅದನ್ನು ರಿಯಲ್ ಎಸ್ಟೇಟ್ ಮಹೇಶ್ ತೀರಿಸಲು ಸಾಧ್ಯವೇ? ಅವರು ಸದನದ ಒಳಗೆ ಮಾತನಾಡಿರುವ ಹಾಗೆ ಸದನದ ಹೊರಗೆ ಬಂದು ಮಾತನಾಡಲಿ. ನಾನು ಮಾಡಿರುವ ಸಾಲಕ್ಕೆ ನನ್ನ ಕುಟುಂಬಸ್ಥರು ಜವಾಬ್ದಾರರಾಗಿದ್ದು, ಇದರಲ್ಲಿ ರಿಯಲ್ ಎಸ್ಟೇಟ್ ಮಹೇಶ್ ಅವರ ಅವಶ್ಯಕತೆ ನನಗಿಲ್ಲ. ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.