ನಮಗೆ ಬರಬೇಕಾದ ಹಕ್ಕನ್ನು ಕೇಳಲು ನಾಳೆ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದೇವೆ: ಸತೀಶ್ ಜಾರಕಿಹೊಳಿ.

33
firstsuddi

ಬೆಂಗಳೂರು: ನಮಗೆ ಬರಬೇಕಾದ ಹಕ್ಕನ್ನು ಕೇಳಲು ನಾಳೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಪ್ರತಿಭಟನೆಯನ್ನು ಸಮರ್ಥನೆ ಮಾಡಿಕೊಂಡು ಬಿಜೆಪಿ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ನಮಗೆ ಬರಬೇಕಾದ ಹಕ್ಕನ್ನು ಕೇಳುತ್ತಿದ್ದೇವೆ. ಬೇರೆ ಬೇರೆ ಸಚಿವರು ಹೋಗಿ ಭೇಟಿ ಮಾಡುವ ಪ್ರಯತ್ನ ಮಾಡಿದರು. ಕೃಷ್ಣ ಭೈರೇಗೌಡ ಸೇರಿ ಹಲವು ಸಚಿವರು ಹೋದರೂ ಪ್ರಯೋಜನ ಆಗಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ನಾಳೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ನಿನ್ನೆ ಸವಿಸ್ತಾರವಾಗಿ ಹೇಳಿದ್ದಾರೆ. ಯಾಕೆ ಹೋಗ್ತಾ ಇದ್ದೀವಿ? ಏನು ಕಾರಣ? ಎಷ್ಟು ದುಡ್ಡು ಬರಬೇಕು ಅಂತ ಹೇಳಿದ್ದಾರೆ. ನಮ್ಮ ಹಕ್ಕು ಪಡೆಯಲು ನಾಳೆ ಕೇಂದ್ರ ಸರ್ಕಾರದ ಗಮನ ಸೆಳೆಯೋಕೆ ಪ್ರತಿಭಟನೆ ಮಾಡುತ್ತಿದ್ದೇವೆ. ಬರ ಪರಿಹಾರ ಇಲ್ಲಿಯವರೆಗೆ ಸಿಕ್ಕಿಲ್ಲ. ಸಿಎಂ, ಕೃಷ್ಣ ಭೈರೇಗೌಡ ಹೋದರೂ ಪರಿಹಾರ ಸಿಕ್ಕಿಲ್ಲ. ಅಂತಿಮವಾಗಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಹರಿಹಾಯ್ದರು.