ನಮೀಬಿಯಾ ಚೀತಾ ‘ಒಬಾನ್’, ಕುನೋ ಅಭಯಾರಣ್ಯಕ್ಕೆ ಶಿಫ್ಟ್…

59
firstsuddi

ಶಿಯೋಪುರ್: ಕುನೋ ರಾಷ್ಟ್ರೀಯ ಉದ್ಯಾನವನದಿಂದ ತಪ್ಪಿಸಿಕೊಂಡಿದ್ದ ‘ಒಬಾನ್’ ಎಂಬ ಗಂಡು ಚಿರತೆಯನ್ನು ಕರೆತರುವಲ್ಲಿ ಕೊನೆಗೂ ಮಧ್ಯ ಪ್ರದೇಶದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ಹಿಂದೆ ಭಾರತಕ್ಕೆ ಬಂದಿದ್ದ ನಮೀಬಿಯಾದ ಗಂಡು ಚಿರತೆಗಳಲ್ಲಿ ಒಂದಾದ ‘ಒಬಾನ್’, ಕುನೋ ರಾಷ್ಟ್ರೀಯ ಉದ್ಯಾನವನದ ಗಡಿಯಿಂದ ತಪ್ಪಿಸಿಕೊಂಡಿತ್ತು. ಐದು ದಿನಗಳ ಹಿಂದೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸಮೀಪದ ಹಳ್ಳಿಯೊಂದರಲ್ಲಿ ಈ ಚೀತಾ ಕಾಣಿಸಿಕೊಂಡಿತ್ತು. ಅದನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮರಳಿ ತರಲಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿ ಬಿಡಲಾದ ನಮೀಬಿಯಾದಿಂದ ತರಲಾದ ಚಿರತೆಗಳಲ್ಲಿ ‘ಒಬಾನ್’ ಕೂಡ ಒಂದಾಗಿದೆ. ಏಪ್ರಿಲ್ 2 ರಂದು ಇದು ಕುನೊ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿ ಸುಮಾರು 20 ಕಿಮೀ ದೂರದಲ್ಲಿರುವ ಝಾರ್ ಬರೋಡಾ ಗ್ರಾಮವನ್ನು ತಲುಪಿದೆ. ಇದರ ಮೇಲೆ ನಿಗಾ ಇರಿಸಲಾಗಿತ್ತು. ನಾಲ್ಕು ದಿನಗಳ ನಂತರವೂ ‘ಒಬಾನ್’ ರಾಷ್ಟ್ರೀಯ ಉದ್ಯಾನವನಕ್ಕೆ ಹಿಂತಿರುಗುವ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ, ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ರಕ್ಷಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ನಿನ್ನೆ ಕುನೋ ರಾಷ್ಟ್ರೀಯ ಉದ್ಯಾನವನದ ಗಡಿಯ ಹೊರಗೆ ‘ಒಬಾನ್’ ಸ್ಥಳವನ್ನು ಪತ್ತೆಹಚ್ಚಲಾಗಿತ್ತು, ಶಿವಪುರಿ ಜಿಲ್ಲೆಯ ಗಡಿಭಾಗದ ಕಾಡಿನಲ್ಲಿ  ಅಲೆದಾಡುತ್ತಿತ್ತು. ಅದರ ಸ್ಥಳವನ್ನು ಆಧರಿಸಿ, ಚಿರತೆಯ ನಿಗಾ ತಂಡವು ರಕ್ಷಿಸಿದೆ. ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. 1952 ರಲ್ಲಿ ಭಾರತದಲ್ಲಿ ಈ ಚಿರತೆ ಸಂತತಿ ನಾಶವಾಗಿತ್ತು. ಆದ್ದರಿಂದ ‘ಪ್ರಾಜೆಕ್ಟ್ ಚೀತಾ’ ಭಾಗವಾಗಿ 8 ಚಿರತೆಗಳನ್ನು (5 ಹೆಣ್ಣು ಮತ್ತು 3 ಗಂಡು) ಆಫ್ರಿಕಾದ ನಮೀಬಿಯಾದಿಂದ ದೇಶಕ್ಕೆ ತರಲಾಯಿತು.

ನಮೀಬಿಯಾದ ಚೀತಾವನ್ನು ನಿನ್ನೆ ಸಂಜೆ ಶಿವಪುರಿ ಜಿಲ್ಲೆಯ ಅರಣ್ಯದಿಂದ ರಕ್ಷಿಸಲಾಗಿದೆ. ‘ಶಿವಪುರಿ ಜಿಲ್ಲೆಯ ಗಡಿಯಲ್ಲಿರುವ ಬೈರಾದ್ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಿಂದ ಸಂಜೆ 4-5 ರ ಸುಮಾರಿಗೆ ಓಬನ್ ಸಿಕ್ಕಿಬಿದ್ದಿದ್ದು, ಕುನೋ ರಾಷ್ಟ್ರೀಯ ಉದ್ಯಾನವನದ ಪಾಲ್ಪುರ ಅರಣ್ಯಕ್ಕೆ ಬಿಡಲಾಗಿದೆ’ ಎಂದು ಕುನೋ ವನ್ಯಜೀವಿ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಅವರು ತಿಳಿಸಿದ್ದಾರೆ.