ನೇಣು ಬಿಗಿದುಕೊಂಡು ಎಎಸ್ ಐ ಆತ್ಮಹತ್ಯೆ!

94
firstsuddi

ಕಲಬುರಗಿ : ಅನಾರೋಗ್ಯದ ಹಿನ್ನಲೆ ಎಎಸ್ ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪೊಲೀಸ್ ಕ್ವಾರ್ಟಸ್ ನಲ್ಲಿ ನಡೆದಿದೆ.

ಜಗನ್ನಾಥ (54) ಆತ್ಮಹತ್ಯೆಗೆ ಶರಣಾದ ಎಎಸ್ ಐ. ಮೂಲತಃ ಕಮಲಾಪುರ ತಾಲ್ಲೂಕಿನ ಬಾಚನಾಳ ಗ್ರಾಮದ ನಿವಾಸಿಯಾಗಿರುವ ಜಗನ್ನಾಥ ರಿಸರ್ವ್ ಪೊಲೀಸ್ ನಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳಿಂದ ಜಗನ್ನಾಥ ಕರ್ತವ್ಯಕ್ಕೆ ಗೈರು ಆಗಿದ್ದರು ಎಂದು ತಿಳಿದು ಬಂದಿದೆ.

ರಾತ್ರಿ ಎಲ್ಲರೂ ಮನೆಯಲ್ಲಿ ಮಲಗಿರುವಾಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.