ನ್ಯಾಷನಲ್ ಹೆರಾಲ್ಡ್ ಪ್ರಕರಣ – ಇಂದು ಇಡಿ ವಿಚಾರಣೆಗೆ ಡಿಕೆಶಿ ಗೈರು…

62
firstsuddi

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಡಿಕೆ ಬ್ರದರ್ಸ್ ಗೆ ಸಮನ್ಸ್ ನೀಡಿತ್ತು. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಇಂದು ಡಿ.ಕೆ.ಶಿವಕುಮಾರ್ ಅವರು ವಿಚಾರಣೆಗೆ ಗೈರಾಗಲಿದ್ದಾರೆ. ಅಲ್ಲದೆ ಬೇರೆ ದಿನಾಂಕ ನಿಗದಿಗೆ ಇ-ಮೇಲ್ ಮೂಲಕ ಇಡಿಗೆ ಮನವಿ ಮಾಡಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಂದು ಇಡಿ ವಿಚಾರಣೆಗೆ ದೆಹಲಿಗೆ ಹೋಗಬೇಕಿತ್ತು. ಆದರೆ ನಿನ್ನೆ ಖರ್ಗೆಯವರ ಕಾರ್ಯಕ್ರಮ ಇತ್ತು. ಇಂದು ವಿನಯ್ ಕುಲಕರ್ಣಿಯವರ ಪೂರ್ವ ನಿಯೋಜಿತ ಕಾರ್ಯಕ್ರಮವಿದೆ. ಆದ್ದರಿಂದ ಇಡಿ ವಿಚಾರಣೆಗೆ ಹಾಜರಾಗಲು ಆಗಲ್ಲ ಎಂದು ಮನವಿ ಮಾಡಿದ್ದೇನೆ. ಸಂಸದ ಡಿ.ಕೆ.ಸುರೇಶ್ ಇಂದು ಇಡಿ ವಿಚಾರಣೆಗೆ ಹಾಜರಾಗ್ತಾರೆ ಎಂದು ತಿಳಿಸಿದರು.