ಪತ್ನಿ ದಪ್ಪ ಆಗಿದ್ದಾಳೆಂದು ವಿಚ್ಛೇದನಕ್ಕೆ ಮುಂದಾದ ಪತಿ!

54
firstsuddi

ಲಕ್ನೋ : ಪತ್ನಿ ದಪ್ಪ ಆಗಿದ್ದಾಳೆ ಎಂಬ ಕಾರಣಕ್ಕೆ ಪತಿ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಇದೀಗ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೀರತ್ ನ ಝಾಕಿರ್ ಕಾಲೋನಿಯ ನಿವಾಸಿ ನಜ್ಮಾ ಅವರು ಮೀರತ್ ನ ಫತಾಹ್ ಪುರ ನಿವಾಸಿ ಸಲ್ಮಾನ್ ನೊಂದಿಗೆ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಏಳು ವರ್ಷದ ಮಗನೂ ಇದ್ದಾನೆ. ತನ್ನ ಪತಿ ಸಲ್ಮಾನ್ ತನ್ನನ್ನು ಒಂದು ತಿಂಗಳ ಹಿಂದೆ ಮನೆಯಿಂದ ಹೊರಹಾಕಿದ್ದಾರೆ ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ನಜ್ಮಾ ಆರೋಪಿಸಿದ್ದಾರೆ.

ವಿಚ್ಛೇದನದ ಕಾರಣವನ್ನು ತಿಳಿಯಲು ಪ್ರಯತ್ನಿಸಿದಾಗ, ಪತಿ ಸಲ್ಮಾನ್ ನನಗೆ ದಪ್ಪವಾಗಿದ್ದೀಯಾ ಮತ್ತು ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಹೇಳಿ ಕಳುಹಿಸಿದ್ದಾರೆ. ತಾನು ಸಲ್ಮಾನ್ ಜೊತೆ ಬಾಳಲು ಇಚ್ಛಿಸುತ್ತೇನೆ. ಆದರೆ ನನ್ನ ಪತಿ ವಿಚ್ಛೇದನ ಬೇಕು ಎಂದು ಕೇಳಿದ್ದಾರೆ. ಇದರಿಂದ ನಾನು ಅಸಹಾಯಕಳಾಗಿದ್ದೇನೆ ಎಂದು ಹೇಳಿದ್ದಾರೆ.

ನಜ್ಮಾ ಮೀರತ್ ನ ಲಿಸಾಡಿ ಗೇಟ್ ಪೊಲೀಸ್ ಠಾಣೆಗೆ ಬಂದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವಿಷಯದಲ್ಲಿ ಸಿಒ ಕೊತ್ವಾಲಿ ಅರವಿಂದ್ ಚೌರಾಸಿಯಾ ಅವರು, ಅಂತಹ ಯಾವುದೇ ಪ್ರಕರಣವು ಇನ್ನೂ ತನ್ನ ಗಮನಕ್ಕೆ ಬಂದಿಲ್ಲ, ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.