ಪಬ್ ಗೆ ತೆರಳಿದ್ದಾಗ ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆ- ತನಿಖೆ ನಡೆಸುವಂತೆ ದೂರು ನೀಡಿದ ಯುವತಿ…

74
firstsuddi

ಬೆಂಗಳೂರು: ಪಬ್ ಗೆ ಹೋಗಿದ್ದ ಖಾಸಗಿ ಕಂಪನಿ ಯುವತಿಯೊಬ್ಬಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆ ಇದ್ದು, ತನಿಖೆ ನಡೆಸಿ ಎಂದು ನಗರದ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಪೊಲೀಸ್ ಮೂಲಗಳ ಪ್ರಕಾರ, ಡಿ.12ರ ರಾತ್ರಿ ಸಂತ್ರಸ್ತೆ ಕೋರಮಂಗಲದ ಪಬ್‌ವೊಂದಕ್ಕೆ ಹೋಗಿದ್ದು, ಬಳಿಕ ಏನು ಆಯಿತೋ ಏನೋ ಆಕೆಗೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದುದ್ದಾಗಿ ಹೇಳಿದ್ದಾಳೆ. ತಾನು ಅಲ್ಲಿಗೆ ಹೇಗೆ ಬಂದೆ ಎಂಬುದೇ ತಿಳಿದಿಲ್ಲ ಎಂದಿದ್ದಾಳೆ. ಈ ವೇಳೆ ತನ್ನ ದೇಹದ ಮೇಲೆ ತರಚು ಗಾಯಗಳಾಗಿದ್ದು, ಗ್ಯಾಂಗ್ ರೇಪ್ ಆಗಿದೆ ಎಂಬ ಶಂಕೆ ಇದೆ ಎಂದು ದೂರು ನೀಡಿದ್ದಾಳೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಠಾಣಾ ಪೊಲೀಸರು ಯುವತಿಯನ್ನು ರಕ್ಷಿಸಿದ್ದರು. ಇಲ್ಲಿಂದ ಕೋರಮಂಗಲ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಪ್ರಜ್ಞಾಹೀನಳಾಗಿದ್ದ ವೇಳೆ ನನ್ನ ಮೇಲೆ ಅತ್ಯಾಚಾರ ನಡೆದಿರುವ ಶಂಕೆಯಿದೆ. ನಾನೆಲ್ಲಿದ್ದೆ ಅನ್ನೋದರ ಬಗ್ಗೆ ತನಿಖೆ ಮಾಡಿ ಎಂದು ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ. ಯುವತಿ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.