ಪರೀಕ್ಷೆಯಲ್ಲಿ ಫೇಲ್ – ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ!

84
firstsuddi

ನವದೆಹಲಿ : ವೈದ್ಯಕೀಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ದೆಹಲಿಯ ಐಟಿಒನಲ್ಲಿರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್ನಲ್ಲಿ ವ್ಯಾಸಂಗ ಮಾಡ್ತಿದ್ದ 19 ವರ್ಷದ ದಿವ್ಯಾ ಆತ್ಮಹತ್ಯಗೆ ಶರಣಾಗಿದ್ದಾರೆ. ಡಿಸೆಂಬರ್ 29 ರ ಸಂಜೆ ಫಲಿತಾಂಶ ಪ್ರಕಟನೆಗೊಂಡಿದ್ದು, ದಿವ್ಯಾ ಎರಡು ಪೇಪರ್ ಗಳಲ್ಲಿ ಫೇಲ್ ಆಗಿದ್ದಳು. ಅಂದಿನಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ಆಕೆಯ ಸಹಪಾಠಿಗಳು ಹೇಳಿದ್ದಾರೆ.

ಕೊಠಡಿಯಲ್ಲಿ ನಿನ್ನೆ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸ್ಟೆಲ್ ಸಿಬ್ಬಂದಿ ಬಾಗಿಲನ್ನು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ರಿಜಿಸ್ಟರ್ ನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.