ಪಿಎಫ್‍ಐ ಬ್ಯಾನ್ : ಸೆಪ್ಟೆಂಬರ್ ಕ್ರಾಂತಿ ಎಂದು ಅಲೋಕ್ ಕುಮಾರ್ ಟ್ವೀಟ್.

58
firstsuddi

ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದ್ದು, ಇದು ಸೆಪ್ಟೆಂಬರ್ ಕ್ರಾಂತಿ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಟ್ವೀಟ್ ನಲ್ಲಿ ಏನಿದೆ?: ಸಿಮಿ (SIMI) ಬ್ಯಾನ್ ಆಗಿದ್ದು 2001 ಸೆ. 26. ಪಿಎಫ್ಐ (PFI) ಬ್ಯಾನ್ ಆಗಿದ್ದು 2022 ಸೆ. 28. ಇದು ಸೆಪ್ಟಂಬರ್ ರೆವಲ್ಯೂಷನ್ ಆಗಿದೆ. ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧ ಹಾಗೂ ಕಾನೂನು ಬಾಹೀರ ಚಟುವಟಿಕೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮದ ಭರವಸೆ ಮೂಡಿದೆ. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.