ಪುನೀತ್ ರಾಜಕುಮಾರರಂತೆಯೇ ನನ್ನ ಕಣ್ಣನ್ನು ದಾನ ಮಾಡಿ – ನೇಣಿಗೆ ಶರಣಾದ ಅಭಿಮಾನಿ…

87
firstsuddi

ಆನೇಕಲ್ : ಅಭಿಮಾನಿಯೋರ್ವ ಪುನೀತ್ ರಾಜಕುಮಾರರಂತೆಯೇ ತನ್ನ ಕಣ್ಣನ್ನು ದಾನ ಮಾಡಿ ಎಂದು ಹೇಳಿ ನೇಣಿಗೆ ಶರಣಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.

ರಾಜೇಂದ್ರ (40) ನೇಣಿಗೆ ಶರಣಾದ ಅಭಿಮಾನಿ. ಈತ ನಟ ಪುನೀತ್ ಅವರ ಸಾವಿನಿಂದ ಕಂಗಾಲಾಗಿದ್ದ. ಇದರ ನಡುವೆ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ಇಟ್ಟುಕೊಂಡು ತನ್ನ ಮನೆಯಲ್ಲೆಲ್ಲಾ ತನ್ನ ಕಣ್ಣುಗಳನ್ನು ಸಹ ಇದೇ ರೀತಿ ದಾನ ಮಾಡಿ ಎಂದು ತಿಳಿಸುತ್ತಲೇ ಇದ್ದನಂತೆ. ಇನ್ನು ನಿನ್ನೆ ಮಧ್ಯಾಹ್ನ ಸಹ ತನ್ನ ತಾಯಿಯೊಂದಿಗೆ, ನೇತ್ರದಾನ ಮಾಡಿದ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದನಂತೆ.

ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.