ಪೊಲೀಸ್ ಇಲಾಖೆ ನೀಡುವ ಎಫ್ಎಸ್ಎಲ್ ವರದಿಯೇ ಅಧಿಕೃತ: ಸಿದ್ದರಾಮಯ್ಯ.

49
firstsuddi

ಕಾರವಾರ: ಖಾಸಗಿ ಸಂಸ್ಥೆಗಳು ನೀಡುವ ಎಫ್ಎಸ್ಎಲ್ ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಫ್ಎಸ್ಎಲ್ ವರದಿ ವಿಚಾರದಲ್ಲಿ ಖಾಸಗಿ ಸಂಸ್ಥೆ ನೀಡುವ ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಬದಲಾಗಿ ಪೊಲೀಸ್ ಇಲಾಖೆಯಿಂದ ನೀಡುವ ವರದಿಯೇ ಅಧಿಕೃತ ಎಂದು ಹೇಳಿದರು.

ಮಂಗನ ಕಾಯಿಲೆ ಕುರಿತು ಮಾತನಾಡಿ, ಕಾಯಿಲೆಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.