ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಯ ಬಂಧನ- 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ…

39
firstsuddi

ಬೆಂಗಳೂರು: ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ.

ರಿತಿಕ್ ರಾಜ್ ಬಂಧಿತ ಆರೋಪಿ. ಜಾರ್ಖಂಡ್‌ನಿಂದ ನಗರಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು. ಪೋಸ್ಟ್ ಮೂಲಕ ನಗರದ ವಿವಿಧ ಭಾಗಗಳಿಗೆ ಡ್ರಗ್ಸ್ ಸರಬರಾಜು ಮಾಡಲಾಗುತಿತ್ತು.

ಅಂಚೆ ಮೂಲಕ ಡ್ರಗ್ಸ್ ಬಂದ ವಿಚಾರವನ್ನು ತಿಳಿದ ಸಿಸಿಬಿ ಪೊಲೀಸರು ಕೂಡಲೆ ಫಿಲ್ಡ್​​ಗೆ ಇಳಿದಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ. ಈ ಗಿಫ್ಟ್ ಬಾಕ್ಸ್ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದಾಗ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಂತರ ಸಿಸಿಬಿ ಪೊಲೀಸರು ಆರೋಪಿಯಿಂದಲೇ ಬಾಕ್ಸ್ ಓಪನ್ ಮಾಡಿಸಿದ್ದಾರೆ. ಬಾಕ್ಸ್ ಓಪನ್ ಮಾಡಿದಾಗ ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಇರುವುದು ಪತ್ತೆಯಾಗಿದೆ.

ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷದಿಂದ ಅಂಚೆ ಮೂಲಕ ಚರಸ್ ಕಳುಸಿದ್ದನು. ಇತ್ತ ರಿತಿಕ್ ರಾಜ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅದಿತ್ ಸರ್ವೋತ್ತಮ್ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.