ಪ್ರೇಯಸಿಯನ್ನು ಕೊಂದು ಹೂತು ಹಾಕಿದ ಪ್ರಿಯಕರ!

157
firstsuddi

ಕೊಪ್ಪಳ : ಪ್ರಿಯತಮೆಯ ಶೀಲ ಶಂಕಿಸಿ ಪ್ರಿಯಕರ ಆಕೆಯ ಕತ್ತು ಹಿಸುಕಿ ಹೂತು ಹಾಕಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮದ್ದಾನವ್ವ (19) ಕೊಲೆಯಾದ ಯುವತಿ. ಯಲ್ಲಪ್ಪ ಬಮ್ಮನಗೌಡ (22) ಕೊಲೆ ಮಾಡಿದ ಪ್ರಿಯಕರ. ಮೃತ ಮದ್ದಾನವ್ವ ಯಲ್ಲಪ್ಪ ಬಮ್ಮನಗೌಡನನ್ನು ಪ್ರೀತಿಸುತ್ತಿದ್ದಳು. ಒಂದು ವರ್ಷದ ನಂತರ ಮದುವೆ ಮಾಡುವುದಾಗಿ ಎರಡು ಕುಟುಂಬದವರು ಒಪ್ಪಿಕೊಂಡಿದ್ದರಂತೆ. ಮದ್ದಾನವ್ವನ ಮನೆಯವರು ಆಕೆಯನ್ನು ಯಲ್ಲಪ್ಪನ ಜೊತೆಗೆ ಬಿಟ್ಟಿದ್ದರು. ಇತ್ತ ಯುವಕ, ಯುವತಿಯ ಮೇಲೆ ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಯುವತಿ ಶವವನ್ನು ಮುರುಡಿ ಗ್ರಾಮದ ಕೆರೆ ಹತ್ತಿರದ ಜಮೀನಲ್ಲಿ ಹೂತು ಹಾಕಿದ್ದಾನೆ.

ಆದರೆ ಯುವತಿ ಮನೆಯವರು ಆಕೆ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಯುವತಿ ಮನೆಯವರ ದೂರು ಸ್ವೀಕರಿಸಿದ ಪೊಲೀಸರು, ಪ್ರಿಯಕರ ಯಲ್ಲಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಿಯತಮೆ ಮದ್ದಾನವ್ವಳನ್ನು ಕೊಲೆ ಮಾಡಿರುವುದಾಗಿ ಆತ ಬಾಯಿಬಿಟ್ಟಿದ್ದಾನೆ. ಆತನ ಸಹೋದರ ರಮೇಶ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಜಮೀನಿನಲ್ಲಿ ಹೂತ ಶವವನ್ನು ಪೊಲೀಸರು ಹೊರ ತೆಗೆಸಿದ್ದು ಪ್ರಕರಣದ ತನಿಖೆ ಮುಂದುವರೆದಿದೆ.