ಫುಡ್ ಡೆಲಿವರಿ ಬಾಯ್ ಕುತ್ತಿಗೆ ಹಿಡಿದು ಹೊರದಬ್ಬಿದ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ…

72
firstsuddi

ಬೆಂಗಳೂರು : ಮಹಿಳಾ ಸಿಬ್ಬಂದಿಯೊಬ್ಬರು ಜೊಮಾಟೊ ಡೆಲಿವರಿ ಬಾಯ್ ನ ಕುತ್ತಿಗೆ ಪಟ್ಟಿ ಹಿಡಿದು ಹೊರದಬ್ಬಿರುವ ಘಟನೆ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರೀಲ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ಕಳೆದ ನಾಲ್ಕು ದಿನದ ಹಿಂದೆ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೊಮಾಟೊ ಡೆಲಿವರಿ ಬಾಯ್ ಸಂಜಯ್ ಎಂಬುವರು ಆರ್ಡರ್ ಮಾಡಿದ್ದ ಫುಡ್ ಪ್ಯಾಕೆಟ್ ಪಡೆಯಲು ರೆಸ್ಟೋರೆಂಟ್ ಗೆ ಬಂದಿದ್ದರು. ಈ ವೇಳೆ ಫುಡ್ ಪ್ಯಾಕೆಟ್ ನೀಡಲು ತಡವಾಗಿದ್ದನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳಾ ಸಿಬ್ಬಂದಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿ ಕುತ್ತಿಗೆ ಪಟ್ಟಿ ಹಿಡಿದು ಡೆಲಿವರಿ ಬಾಯ್ ನನ್ನು ಅಲ್ಲಿಂದ ಹೊರದಬ್ಬಿದ್ದಾರೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಭೇಟಿಯಾಗಿ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿದ ಬಳಿಕ ಮ್ಯಾನೇಜರ್ ಮಹಿಳೆಯಿಂದ ಫುಡ್ ಡೆಲಿವರಿ ಬಾಯ್ ಗೆ ಕ್ಷಮಾಪಣೆ ಕೇಳಿಸಿ, ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೇ ಡೆಲಿವರಿ ಬಾಯ್ ಒಂದು ದಿನದ ವೇತನವನ್ನು ಕನ್ನಡಪರ ಸಂಘಟನೆಗಳು ಕೊಡಿಸಿದ್ದಾರೆ.