ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಯತ್ನ – ಆರೋಪಿ ಸಮೀರ್ ಪೊಲೀಸ್ ವಶಕ್ಕೆ…

42
firstsuddi

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಸುನೀಲ್ ಎಂಬವರ ಮೇಲೆ ನಡೆದ ದಾಳಿ ಯತ್ನ ಪ್ರಕರಣ ಸಂಬಂಧ ಆರೋಪಿ ಸಮೀರ್ ನನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಮೀರ್ ಬಂಧನಕ್ಕಾಗಿ 3 ವಿಶೇಷ ಪೊಲೀಸ್ ತಂಡ ರಚಿಸಿದ್ದ ಎಸ್ಪಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಶಿವಮೊಗ್ಗದಲ್ಲಿ ಸಮೀರ್ ನನ್ನು ವಶಕ್ಕೆ ಪಡೆದಿದ್ದಾರೆ. ಈ ಕೇಸ್ ನಲ್ಲಿ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಸುನೀಲ್ ಮೇಲೆ ಮಚ್ಚು ಬೀಸಿದ್ದ ಎ1 ಸಮೀರ್ ಹಾಗೂ ಮತ್ತಿಬ್ಬರು ಆರೋಪಿಗಳಾದ ಮನ್ಸೂರ್ ಮತ್ತು ಐಮಾನ್ ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇಬ್ಬರ ಪಾತ್ರದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಇನ್ನು ಸುನೀಲ್ ಮೇಲೆ ನಡೆದ ಹಲ್ಲೆ ಯತ್ನ ಖಂಡಿಸಿ ಇಂದು ಸಾಗರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ. ಬೆಳಗ್ಗೆಯಿಂದ ಸಂಜೆ ತನಕ ಬಂದ್ ನಡೆಯಲಿದೆ. ಪಟ್ಟಣದ ಎಲ್ಲಾ ಅಂಗಡಿ-ಮುಂಗಟ್ಟುಗಳು ವ್ಯಾಪಾರ ಸ್ಥಗಿತಗೊಳಿಸಿವೆ.

ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳಿಂದ ಗಣಪತಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯು ವಿವಿಧ ರಸ್ತೆಗಳಲ್ಲಿ ಸಾಗಲಿದ್ದು, ನಂತರ ಮುಖಂಡರು ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.