ಬರೋಬ್ಬರಿ 580 ವರ್ಷಗಳ ಬಳಿಕ ಇಂದು ಸಂಭವಿಸಲಿದೆ ಸುದೀರ್ಘ ಚಂದ್ರಗ್ರಹಣ…

71
firstsuddi

ಬೆಂಗಳೂರು : ಬರೋಬ್ಬರಿ 580 ವರ್ಷಗಳ ಬಳಿಕ ಇಂದು ಅತಿಸುದೀರ್ಘ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿದೆ.

ಭಾಗಶಃ ಗ್ರಹಣವು ಇಂದು ಮಧ್ಯಾಹ್ನ 12.48ಕ್ಕೆ ಆರಂಭವಾಗಿ ಸಂಜೆ 4.17ಕ್ಕೆ ಮುಕ್ತಾಯವಾಗಲಿದೆ. ಈ ಚಂದ್ರ ಗ್ರಹಣದ ಅವಧಿಯು 3 ಗಂಟೆ 28 ನಿಮಿಷ 24 ಸೆಕೆಂಡ್ಗಳ ಕಾಲ ಇರುತ್ತದೆ. ಫೆಬ್ರವರಿ 18, 1440ರಂದು ಕೊನೆಯ ಬಾರಿಗೆ ಇಂತಹ ಧೀರ್ಘಾವಧಿಯ ಭಾಗಶಃ ಚಂದ್ರಗ್ರಹಣ ಸಂಭವಿಸಿತ್ತು. ಮುಂದಿನ ಬಾರಿ ಇದೇ ರೀತಿಯ ವಿದ್ಯಮಾನ 2669ರ ಫೆಬ್ರವರಿ 8ರಂದು ಸಂಭವಿಸಲಿದೆ. ಚಂದ್ರನು ರಕ್ತಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಈ ಚಂದ್ರಗ್ರಹಣ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್ ಹಾಗೂ ಏಷ್ಯಾದ ಕೆಲವು ದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗೋಚರವಾಗಲಿದೆ. ಮಧ್ಯಾಹ್ನ 12.48ರಿಂದ 4.17ರ ನಡುವೆ ಗ್ರಹಣ ನಡೆಯೋದ್ರಿಂದ ಭಾರತದಲ್ಲಿ ಇದು ಗೋಚರಿಸುವುದಿಲ್ಲ. ಆದರೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಗ್ರಹಣದ ನೆರಳು ಕಾಣಿಸಬಹುದು ಅಂತ ವಿಜ್ಞಾನಿಗಳು ಹೇಳಿದ್ದಾರೆ.