ಬಾಕಿ ಬಿಲ್ ಕೊಡಲು ಅಧಿಕಾರಿಗಳ ಹಿಂದೇಟು- ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ…

72
firstsuddi

ಬೆಳಗಾವಿ: ಬಾಕಿ ಬಿಲ್ ಕೊಡಲು ಅಧಿಕಾರಿಗಳ ಹಿಂದೇಟು ಹಿನ್ನೆಲೆ ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಗುತ್ತಿಗೆದಾರ ನಾಗಪ್ಪ ಬಂಗಿ ಎನ್ನುವವರು ನಗರದ ಕೋಟೆ ಆವರಣದಲ್ಲಿರುವ ಕಚೇರಿ ಬಳಿ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಎಸ್. ಸೊಬರದ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ನಾಗಪ್ಪ ಬಂಗಿ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಾಗಪ್ಪ ಅವರು 2022ರಲ್ಲಿ ಹಲಗಾ ಗ್ರಾಮದಿಂದ ತಿಗಡಿ ಗ್ರಾಮದವರೆಗೆ ರಸ್ತೆ ಮಾಡಿದ್ದರು. ಇಲಾಖೆಯು ನಿರ್ಮಿಸಿದ್ದ ರಸ್ತೆ ನಿರ್ವಹಣೆಗೆ ವರ್ಕ್ ಆರ್ಡರ್ ಕೊಟ್ಟಿತ್ತು. 6 ಲಕ್ಷ 50 ಸಾವಿರ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಮುಗಿಸಿದ್ದು ಕಾಮಗಾರಿ ಮುಗಿದರೂ ಬಿಲ್ ನೀಡದೆ ಅಧಿಕಾರಿಗಳು ಸತಾಯಿಸುತ್ತಿರುವ ಹಿನ್ನೆಲೆ ಎಇಇ ರಾಮೇಶ್ ಹೆಗಡೆ, ಎಇಇ ಬಸವರಾಜ್ ಹಲಗಿ ವಿರುದ್ಧ ಆಕ್ರೋಶ ಹೊರ ಹಾಕಿ ವಿಷ ಸೇವಿಸಿದ್ದಾರೆ. ಬಿಲ್ ಕೊಡಿ ಇಲ್ಲವಾದ್ರೇ ಕುಟುಂಬ ಸಮೇತ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಗುತ್ತಿಗೆದಾರ ನಾಗಪ್ಪ ಬಂಗಿ ಮನವಿ ಮಾಡಿದ್ದರು.