ಬೆಂಗಳೂರಿನಲ್ಲಿ ಕೊರೊನಾ ಆರ್ಭಟ – 20 ಸಾವಿರ ಗಡಿ ದಾಟಿದ ಕೋವಿಡ್ ಪ್ರಕರಣ…

68
firstsuddi

ಬೆಂಗಳೂರು : ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ರಾಜಧಾನಿಯಲ್ಲೇ ಇಪ್ಪತ್ತು ಸಾವಿರದ ಗಡಿ ದಾಟಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 20121 ಕೇಸ್ ದಾಖಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ 2,232 , ಆರ್ ಆರ್ ನಗರ 1,528, ಬೆಂಗಳೂರು ಪೂರ್ವ 3,126 , ದಕ್ಷಿಣ ವಲಯ 3,172, ದಾಸರಹಳ್ಳಿ 493, ಮಹದೇವಪುರ 2,343, ಪಶ್ಚಿಮ 2,454, ಯಲಹಂಕ 1,412, ಅನೇಕಲ್ 921, ಬೆಂಗಳೂರು ಹೊರವಲಯ 1,360 ಜನರಿಗೆ ಸೋಂಕು ದೃಢಪಟ್ಟಿದೆ.

ಜ.13ರ ಕೋವಿಡ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಒಟ್ಟು 1,15,733 ಸಕ್ರಿಯ ಪ್ರಕರಣಗಳಿದೆ. ಈ ಪೈಕಿ ಬೆಂಗಳೂರಿನಲ್ಲೇ 90,893 ಸಕ್ರಿಯ ಪ್ರಕರಣಗಳಿವೆ.