ಬೆಂಗಳೂರು:ಇನ್ನು ವೇದಿಕೆ ಮೇಲೆ ಚೇರ್ ಹಾಕಲ್ಲ. ಚೇರ್ ಸಂಸ್ಕೃತಿಗೆ ಅಂತ್ಯ ಹಾಡಿದ್ದೇವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

135

ಬೆಂಗಳೂರು :ಇನ್ನು ಕಾಂಗ್ರೆಸ್​ ಸಮಾವೇಶದಲ್ಲಿ ವೇದಿಕೆ ಮೇಲೆ ಚೇರ್ ಹಾಕಲ್ಲ. ಚೇರ್ ಸಂಸ್ಕೃತಿಗೆ ಅಂತ್ಯ ಹಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಅವರು ಶುಕ್ರವಾರ  ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್​ನ ಹೊಸ ನಿಯಮ ಒಂದರ ಬಗ್ಗೆ ಮಾತನಾಡಿದ ಶಿವಕುಮಾರ್​ ನಾವು ಇನ್ನುಮುಂದೆ ಕಾಂಗ್ರೆಸ್​ ಸಮಾವೇಶಗಳಲ್ಲಿ ಸ್ಟೇಜ್​ ಮೇಲೆ ಚೇರ್​ ಹಾಕಲ್ಲ. ಸ್ಟೇಜ್​ ಮೇಲೆ ನಾಯಕರಿಗೆ ಚೇರ್​ ಹಾಕಿ ಕೂರಿಸುವ ಸಂಸ್ಕೃತಿಯನ್ನು ನಾವು ಬಿಟ್ಟಿದ್ದೇವೆ. ಹತ್ತು ಜನ ಕಾರ್ಯಕರ್ತರನ್ನು ಕರೆತರದವರೂ ಸ್ಟೇಜ್​ ಮೇಲೆ ಕೂರುತ್ತಿದ್ದರು, ಯಾರನ್ನು ನಾವು ಆಹ್ವಾನಿಸಿರುವುದಿಲ್ಲವೋ ಅವರು ವೇದಿಕೆ ಮೇಲೆ ಬಂದು ಕೂರುತ್ತಿದ್ದರು. ಹೀಗಾಗಿ ನಾವು ವೇದಿಕೆ ಮೆಲೆ ಚೇರ್​ಹಾಕುವ ಸಂಸ್ಕೃತಿಗೆ ವಿದಾಯ ಹೇಳಿದ್ದೇವೆ, ಈ ಬಗ್ಗೆ ರಾಹುಲ್​ ಗಾಂಧಿ ಅವರಿಗೂ ಮಾಹಿತಿ ನೀಡಿದ್ದೇನೆ  ಎಂದಿದ್ದಾರೆ.