ಬೇಲೂರು : ಮಿಕ್ಸಿಯಲ್ಲಿ ವಿದ್ಯುತ್ ಶಾಕ್‌ಗೆ ಯುವಕ ಸಾವು…

100
firstsuddi

ಹಾಸನ : ಮಜ್ಜಿಗೆ ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬೇಲೂರಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ.

ಶರತ್(25)ಮೃತ ದುರ್ದೈವಿ. ಕೊರೊನಾ ಹಿನ್ನಲೆಯಲ್ಲಿ ಹೋಟೆಲ್ ಬಂದ್ ಆಗಿದ್ದ ಕಾರಣ ಅರೇಹಳ್ಳಿ ಬಳಿಯ ದೊಡ್ಡ ಸಾಲಾವರದ ತನ್ನ ದೊಡ್ಡಮ್ಮನವರ ಮನೆಗೆ ಬಂದಿದ್ದ. ಎಂದಿನಂತೆ ಮಿಕ್ಸಿಯಲ್ಲಿ ಮಜ್ಜಿಗೆ ಕಡಿಯುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.