ಬೊಮ್ಮಾಯಿ ಸರ್ಕಾರಕ್ಕೆ ನಾಳೆಗೆ 6 ತಿಂಗಳು – ಸಿಎಂ ಹೇಳಿದ್ದೇನು?

61
firstsuddi

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ನಾಳೆಗೆ ಆರು ತಿಂಗಳು. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ನಮ್ಮ ಸರ್ಕಾರಕ್ಕೆ ಆರು ತಿಂಗಳು ಆಗಿರುವುದರ ಬಗ್ಗೆ ಒಂದು ಪುಸ್ತಕವನ್ನು ಬಿಡುಗಡೆ ಮಾಡುತ್ತೇವೆ. ನಮ್ಮದು ಸ್ಪಂದನಾಶೀಲ ಸರ್ಕಾರ. ಹಾಗಾಗಿ ನಾವು ಯಾವುದೇ ಸರ್ಪೈಸ್ ಘೋಷಣೆ ಮಾಡುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುತ್ತಾ ಹೋಗುತ್ತೇವೆ ಎಂದು ಹೇಳಿದ್ದಾರೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚೆ ನಡೆಯಲಿದೆ. ನಂತರ ಇತರ ವಿಷಯಗಳ ಚರ್ಚೆ ವೇಳೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡುತ್ತೇವೆ. ಕೊರೊನಾ ನಿರ್ವಹಣೆ ಯಾವ ರೀತಿ ಆಗಬೇಕು ಎಂದು ತಜ್ಞರ ಸಮಿತಿಗೆ ವರದಿ ಕೊಡುವಂತೆ ತಿಳಿಸಿದ್ದೇನೆ. ವರದಿ ಬಂದ ತಕ್ಷಣ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಸಿಎಂ ಪಟ್ಟಕ್ಕೆ ಏರಿ ಬೊಮ್ಮಾಯಿ ನಾಳೆ ಆರು ತಿಂಗಳು ಪೂರೈಸುತ್ತಾರೆ. ಇದರ ಜೊತೆಗೆ ಅವರು 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ ನಾನು ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ. ಹಾಗಾಗಿ ನಾಳೆಯೂ ಹುಟ್ಟುಹಬ್ಬದ ಆಚರಣೆ ಆಚರಿಸಿಕೊಳ್ಳುವುದಿಲ್ಲ ಎಂದ ಅವರು, ಜೋಳ ಖರೀದಿ ಬಗ್ಗೆ ಎಲ್ಲ ರೈತರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ಬಂತು. ಅದಕ್ಕೆ ಅವಕಾಶ ಮಾಡಿ ಆದೇಶ ಹೊರಡಿಸಿದ್ದೇವೆ. ಈಗ ರಾಗಿ ಖರೀದಿ ಮುಂದುವರಿಸಬೇಕು ಎನ್ನುವ ಬೇಡಿಕೆ ಬಂದಿದೆ. ಅದಕ್ಕೆ ಕೂಡ ಸಂಪುಟ ಉಪಸಮಿತಿ ಇದೆ. ಅದರಲ್ಲಿ ಅನುಮತಿ ಪಡೆದು ರೈತರಿಗೆ ಅನುಕೂಲ ಆಗುವ ರೀತಿ ಮಾಡುತ್ತೇವೆ ಎಂದರು.