ಭಾರತ ಮೂಲದ ಯುವತಿಯನ್ನು ವರಿಸಿದ ಪಾಕ್ ಕ್ರಿಕೆಟ್ ಆಟಗಾರ ಹಸನ್ ಅಲಿ…

425
firstsuddi

ದುಬೈ : ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ಅವರು ಭಾರತದ ಶಮಿಯಾ ಅರ್ಜೂ ಎಂಬ ಯುವತಿಯನ್ನು ವಿವಾಹವಾಗಿದ್ದಾರೆ. ದುಬೈನ ಖಾಸಗಿ ಹೋಟೆಲ್‍ನಲ್ಲಿ ನಡೆದ ವಿವಾಹ ಸಮಾರಂಭ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಸನ್ ಅಲಿ ಅವರು ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಮತ್ತು ಶೋಯಿಬ್ ಮಲಿಕ್ ಬಳಿಕ ಭಾರತದ ಅಳಿಯನಾದ ಪಾಕಿಸ್ತಾನದ 4ನೇ ಕ್ರಿಕೆಟಿಗರೆನಿಸಿದ್ದಾರೆ. ಶಮಿಯಾ ಅರ್ಜೂ ಅವರು ಮೂಲತಃ ಹರಿಯಾಣದವರಾಗಿದ್ದು, ದೆಹಲಿಯಲ್ಲಿ ನೆಲೆಸಿದ್ದಾರೆ. ಶಮಿಯಾ ಅವರು ಎಮಿರೇಟ್ಸ್ ಏರ್ ಲೈನ್ಸ್ ನಲ್ಲಿ ಫ್ಲೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಐಸಿಸಿ ವಿಶ್ವಕಪ್ ಟೂರ್ನಿ ವೇಳೆ ಇವರಿಬ್ಬರ ಪರಿಚಯವಾಗಿದ್ದು, ನಿನ್ನೆ ದುಬೈನ ಖಾಸಗಿ ಹೋಟೆಲ್‍ನಲ್ಲಿ ವಿವಾಹವಾಗಿದ್ದಾರೆ.