ಭಾರತೀಯ ಸಾಂಪ್ರಧಾಯಿಕ ಉಡುಗೆಯನ್ನು ತೊಟ್ಟು ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಅಭಿಜಿತ್ ಬ್ಯಾನರ್ಜಿ…

223
firstsuddi

ಸ್ಟಾಕ್ಹೋಮ್ : ಇಂಡಿಯನ್-ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ಎಸ್ತರ್ ಡುಫ್ಲೋ ಹಾಗೂ ಸಹದ್ಯೋಗಿ ಮೈಕೆಲ್ ಕ್ರೆಮರ್ ಅವರಿಗೆ 2019ನೇ ಸಾಲಿನ ಆರ್ಥಿಕ ವಿಜ್ಞಾನದ ನೋಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. “ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ”ದಲ್ಲಿ ಲಕ್ಷಾಂತರ ಮಕ್ಕಳಿಗೆ ಸಹಾಯ ಮಾಡಿದ್ದರಿಂದ ಮೂವರು ಅರ್ಥಶಾಸ್ತ್ರಜ್ಞರು ಈ ನೊಬೆಲ್ ಗೌರವಕ್ಕೆ ಭಾಜನರಾಗಿದ್ದಾರೆ. ಸ್ಟಾಕ್ಹೋಮ್ ಕನ್ಸರ್ಟ್ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭಕ್ಕೆ ಅಭಿಜಿತ್ ಅವರು ಭಾರತೀಯ ಸಾಂಪ್ರಧಾಯಿಕ ಉಡುಗೆ ಕಪ್ಪು ಕೋಟ್-ಬಿಳಿ ಧೋತಿ ಧರಿಸಿದ್ದು, ಪತ್ನಿ ಎಸ್ತರ್ ಡಫ್ಲೋ ಅವರು ಸೀರೆಯನ್ನುಟ್ಟು ಆಗಮಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.