ಭೀಕರ ರಸ್ತೆ ಅಪಘಾತ- ತಾಯಿ, ಮಗಳು ಸ್ಥಳದಲ್ಲೇ ಸಾವು…

46
firstsuddi

ತುಮಕೂರು: ಕ್ಯಾಂಟರ್ ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ.

ಶಾಂತಲಕ್ಷ್ಮೀ(30), ಪುತ್ರಿ ಚಿನ್ಮಯಿ(5) ಮೃತರು. ಮೃತಪಟ್ಟವರು ತುಮಕೂರಿನ ಕುಂಟಮ್ಮದ ತೋಟದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇವರು ಭೀಮಸಂದ್ರದಿಂದ ಮದುವೆ ಮುಗಿಸಿ ತುಮಕೂರು ನಗರಕ್ಕೆ ಬರುತ್ತಿದ್ದರು.

ತುಮಕೂರು ಕಡೆಯಿಂದ ಹೋಗುತ್ತಿದ್ದ ಕ್ಯಾಂಟರ್ ಲಾರಿಯ ಬ್ರೇಕ್ ಕಟ್ ಆಗಿ ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತ ಶಾಂತಲಕ್ಷ್ಮೀಯ ಪುತ್ರ ತನ್ಮಯ್ ಹಾಗೂ ಆಟೋ ಚಾಲಕ ಗಿರೀಶ್​ಗೆ ಗಂಭೀರ ಗಾಯವಾಗಿದೆ. ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಯಾಳು ತನ್ಮಯ್​ಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋಚಾಲಕ ಗಿರೀಶ್​ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.