ಭೋಜ್‌ಪುರಿ ಹಾಡಿಗೆ ಸಖತ್ ಡ್ಯಾನ್ಸ್ – ನಾಲ್ವರು ಮಹಿಳಾ ಪೊಲೀಸರ ಅಮಾನತು…

56
firstsuddi

ಲಕ್ನೋ : ಉತ್ತರಪ್ರದೇಶದ ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಪೊಲೀಸ್ ಪೇದೆಗಳು ಡಾನ್ಸ್ ಮಾಡಿದ್ದಕ್ಕೆ ನಾಲ್ವರನ್ನು ಅಮಾನತು ಮಾಡಲಾಗಿದೆ. 

ನಾಲ್ವರು ಕಾನ್ಸ್​ಸ್ಟೆಬಲ್ ​ಗಳಲ್ಲಿ ಒಬ್ಬರು ಭೋಜ್ ಪುರಿ ಹಾಡಿಗೆ ನೃತ್ಯ ಮಾಡಿದರೆ, ಇತರರು ಚಪ್ಪಾಳೆ ತಟ್ಟಿದ್ದರು, ಮತ್ತೋರ್ವ ಕಾನ್ಸ್​ಸ್ಟೆಬಲ್ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

ಭೋಜ್‌ಪುರಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ. ವಿಡಿಯೋದಲ್ಲಿ ಅಮಾನತುಗೊಂಡಿರುವ ಕಾನ್ಸ್​ಸ್ಟೆಬಲ್ ಗಳು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮುನಿರಾಜ್ ಜಿ ಅವರು ಗುರುವಾರ ಹೆಚ್ಚುವರಿ ಎಸ್ಪಿ (ಭದ್ರತೆ) ಪಂಕಜ್ ಪಾಂಡೆ ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಕಾನ್ಸ್​ಸ್ಟೆಬಲ್ ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.