ಮಂಡ್ಯ : ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆ ಮೇಲೆ ಐಟಿ ದಾಳಿ…

77
firstsuddi

ಮಂಡ್ಯ : ಸ್ಟಾರ್ ಗ್ರೂಪ್ಸ್ ಮಾಲೀಕ ಮತ್ತು ಅವರ ಸಹೋದರರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉದ್ಯಮಿ ಅಮಿರುಲ್ ಮುರ್ತುಜಾ ಸೇರಿದಂತೆ ಅಮ್ಜಾ, ಶಹಬಾಜ್, ಶಿರೋಜ್ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುರ್ತುಜಾ ಅವರು ಪೌಲ್ಟ್ರಿ ಫಾರ್ಂ, ಹೋಟೆಲ್, ಪೆಟ್ರೋಲ್ ಉದ್ಯಮ ಸೇರಿದಂತೆ ಹಲವಾರು ಉದ್ಯಮ ನಡೆಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗಿನ ಜಾವ ದಾಳಿ ನಡೆದಿದೆ. 10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು, 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಆಸ್ತಿ-ಪಾಸ್ತಿ, ಕಡತ, ಹಣ, ಚಿನ್ನಾಭರಣಗಳನ್ನು ಪರಿಶೀಲನೆ ನಡೆಸಿದ್ದಾರೆ.