ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂದು 850 ಅಡಕೆ ಗಿಡ ನಾಶ ಮಾಡಿದ ಪಾಪಿ…

74
firstsuddi

ಮೈಸೂರು: ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂಬ ದ್ವೇಷಕ್ಕೆ, ಶ್ರಮವಹಿಸಿ ಬೆಳೆದಿದ್ದ 850 ಅಡಕೆ ಗಿಡಗಳನ್ನು ವ್ಯಕ್ತಿಯೊಬ್ಬ ನಾಶ ಮಾಡಿರುವಂತಹ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ್ ಎಂಬುವರಿಗೆ ಸೇರಿದ 3 ಎಕರೆಯಲ್ಲಿ ಬೆಳೆದಿದ್ದ ಅಡಕೆ ಗಿಡಗಳನ್ನು ಅಶೋಕ್ ಎಂಬಾತ ನಾಶ ಮಾಡಿದ್ದಾನೆ. ವೆಂಕಟೇಶ ತನ್ನ ಮಗಳನ್ನು ಅಶೋಕ ಎಂಬಾತನಿಗೆ ಮದುವೆ ಮಾಡಿಕೊಡಲು ಮಾತುಕತೆ ನಡೆದಿತ್ತು. ಆದರೆ ಯುವತಿ ಅಶೋಕ ನಡತೆ ಸರಿಯಿಲ್ಲ ಎಂದು ಅವನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಳು. ಮದುವೆಗೆ ಒಪ್ಪದ್ದಕ್ಕೆ ಯುವತಿ ಕುಟುಂಬದ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಅಶೋಕ್. ಈ ಹಿಂದೆಯೂ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿ ನಾಶ ಮಾಡಿದ್ದಾನೆಂಬ ಆರೋಪವಿದೆ.

ನಿನ್ನೆ ರಾತ್ರಿ ಜಮೀನಿಗೆ ನುಗ್ಗಿ ಅಡಕೆ ಗಿಡಗಳ ನಾಶ ಮಾಡಿದ್ದಾನೆಂದು ಯುವತಿಯ ತಂದೆ ವೆಂಕಟೇಶ ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.