ಮಚ್ಚಿನಿಂದ ಕೊಚ್ಚಿ ಯುವತಿಯನ್ನ ಕೊಲೆಗೈದಿದ್ದ ಆರೋಪಿಯ ಶವ ಕೆರೆಯಲ್ಲಿ ಪತ್ತೆ…

61
firstsuddi

ಮಡಿಕೇರಿ : ಮಚ್ಚಿನಿಂದ ಕೊಚ್ಚಿ ಯುವತಿಯನ್ನು ಕೊಲೆ ಮಾಡಿದ್ದ ಆರೋಪಿ ತಿಮ್ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿರಾಜಪೇಟೆ ತಾಲ್ಲೂಕಿನ ಎರಡನೇ ರುದ್ರಗುಪ್ಪೆ ಗ್ರಾಮದಲ್ಲಿ ಇರುವ ತಿಮ್ಮಯ್ಯ ಅವರ ಮನೆ ಸಮೀಪದ ಕೆರೆಯಲ್ಲಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.

ಜನವರಿ 16ರಂದು ರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಬುಟ್ಟಿಯಂಡ ಆರತಿ(24) ಎಂಬ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪಕ್ಕದ ಊರಿನ ತಿಮ್ಮಯ್ಯ ಎಂಬಾತನೆ ಕೊಲೆ ಮಾಡಿದ್ದನು. ಕೃತ್ಯ ಬಳಿಕ ಕೆರೆಗೆ ಹಾರಿ ತಿಮ್ಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ತಿಮ್ಮಯ್ಯನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಎರಡು ದಿನಗಳಿಂದ ಕೆರೆಯಲ್ಲಿ ನಿರಂತರವಾಗಿ ಹುಡುಕಾಟ ನಡೆಸಿದರೂ ತಿಮ್ಮಯ್ಯನ ಮೃತದೇಹ ಪತ್ತೆಯಾಗಿರಲಿಲ್ಲ. ನಿನ್ನೆ ಮಧ್ಯಾಹ್ನದ ಬಳಿಕ ಕೆರೆಯ ನೀರನ್ನು ಪಂಪ್ ನಿಂದ ಖಾಲಿ ಮಾಡುತ್ತಿದ್ದಾಗ ತಡರಾತ್ರಿ ಮೃತದೇಹ ಪತ್ತೆಯಾಗಿದೆ. ಮೃತ ತಿಮ್ಮಯ್ಯನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ರವಾನಿಸಿದ್ದಾರೆ.