ಮತ್ತೆ ಇಂಧನ ಬೆಲೆ ಏರಿಕೆ ; ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ದರ…

117
firstsuddi

ನವದೆಹಲಿ : ಇಂದು ಸಹ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ ಗೆ 24 ಪೈಸೆ ಹಾಗೂ ಡೀಸೆಲ್ ಗೆ  29 ಪೈಸೆ ಹೆಚ್ಚಳವಾಗಿದೆ. ಮೇ ತಿಂಗಳಿನ ಆರಂಭದಿಂದ ಇಲ್ಲಿಯವರೆಗೆ ಹದಿನಾಲ್ಕು ಬಾರಿ ಏರಿಕೆ ಕಂಡಿದೆ.

ಇಂದಿನ ದರ ಏರಿಕೆ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 93.68 ರೂ. ಹಾಗೂ ಡೀಸೆಲ್ ಬೆಲೆ 84.61 ರೂ.ಗೆ ಏರಿಕೆಯಾಗಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಈಗಾಗಲೇ ಲೀಟರ್ ಪೆಟ್ರೋಲ್ ದರ 100 ರೂ. ದಾಟಿದೆ.

ಕೋಲ್ಕತಾದಲ್ಲಿ ಪೆಟ್ರೋಲ್ 93.72ರೂ, ಡೀಸೆಲ್ 87.46 ರೂಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 99.94ರೂ, ಡೀಸೆಲ್ 91.87ರೂಗೆ ಏರಿಕೆಯಾಗಿದ್ದು, ಶತಕ ಬಾರಿಸಲು ಕೇವಲ 6 ಪೈಸೆ ಮಾತ್ರ ಬೇಕಾಗಿದೆ.

ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ 96.80ರೂ- ಡೀಸೆಲ್ 89.70ರೂಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 95.28ರೂ ಮತ್ತು ಡೀಸೆಲ್ 89.39ರೂ ಗೆ ಏರಿಕೆಯಾಗಿದೆ. ಭೋಪಾಲ್ ನಲ್ಲಿ ಪೆಟ್ರೋಲ್ ದರ 101.77ರೂ ಮತ್ತು ಡೀಸೆಲ್ 93.07ರೂ ಗೆ ಏರಿಕೆಯಾಗಿದೆ.