ಮಧ್ಯ ಪ್ರಿಯರಿಗೆ ಶಾಕ್: ಕರ್ನಾಟಕದಲ್ಲಿ ಮತ್ತೆ ಬಿಯರ್ ದರ ಏರಿಕೆ.

45

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಬಿಯರ್ ದರ ಏರಿಕೆ ಮಾಡಲಾಗಿದೆ.  ಸೋಮವಾರದಿಂದಲೇ ಪರಿಷ್ಕೃತ ಬೆಲೆಗಳು ಜಾರಿಗೆ ಬಂದಿವೆ. ಬಿಯರ್ ಮೇಲಿನ ಸುಂಕ ಏರಿಕೆಯ ಬಗ್ಗೆ ರಾಜ್ಯ ಸರ್ಕಾರ ಆ.23, 2024 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ಬಗ್ಗೆ ಅಂತಿಮ ಅಧಿಸೂಚನೆಯನ್ನು ಜ.8 ರಂದು ಹೊರಡಿಸಲಾಗಿತ್ತು. ಇನ್ನು ಮುಂದೆ ಬಿಯರ್ ಬೆಲೆಗಳು ಆಲ್ಕೋಹಾಲ್ ಅಂಶವನ್ನು ಅವಲಂಬಿಸಿರುತ್ತದೆ. ಆಲ್ಕೋಹಾಲ್ ಅಂಶವನ್ನು ಅವಲಂಬಿಸಿ ಇದನ್ನು 2 ಸ್ಲ್ಯಾಬ್‍ಗಳಾಗಿ ವರ್ಗೀಕರಿಸಲಾಗಿದೆ. ಅಲ್ಕೋಹಾಲ್ ಅಂಶ ಶೇಕಡ 5ಕ್ಕಿಂತ ಕಡಿಮೆ ಇರುವ ಅಥವಾ ಅದಕ್ಕೆ ಸಮಾನವಾಗಿರುವ ಮೈಲ್ಡ್ ಬಿಯರ್ ದರವನ್ನು ಪ್ರತಿ ಬಲ್ಕ್ ಲೀಟರ್ ಗೆ ರೂಪಾಯಿ 12 ಮತ್ತು ಶೇಕಡ 5-8 ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಟ್ರಾಂಗ್ ಬಿಯರ್‍ಗಳಿಗೆ 20 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಈ ಹಿಂದೆ ಆಲ್ಕೋಹಾಲ್ ಅಂಶವನ್ನು ಲೆಕ್ಕಿಸದೆ ಎಲ್ಲಾ ಬಿಯರ್ ಮೇಲಿನ ಅಬಕಾರಿ ಸುಂಕ 10 ರೂಪಾಯಿ ಪಿಬಿಎಲ್ ಆಗಿತ್ತು. ಎಲ್ಲಾ ಸ್ಟ್ರಾಂಗ್ ಬಿಯರ್‍ಗಳ ಕನಿಷ್ಠ ಬೆಲೆ 145 ರೂಪಾಯಿಗಿಂತ ಕಡಿಮೆ ಇರುವುದಿಲ್ಲ. 100 ರೂಪಾಯಿ ಗೆ ಸಿಗುತ್ತಿದ್ದ ಲೆಜೆಂಡ್ ಬಿಯರ್ ದರ ಈಗ 145 ರೂಪಾಯಿ ಹೆಚ್ಚಳವಾಗಿದೆ.