ಮನೆ ಗೋಡೆ ಕುಸಿದು ಬಿದ್ದು ತಾಯಿ ಮಗು ಸಾವು…

463
firstsuddi

ದಾವಣಗೆರೆ : ಭಾರಿ ಮಳೆಯಿಂದ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದು ಬಿದ್ದು ಒಂದು ವರ್ಷದ ಮಗು ಸೇರಿ ತಾಯಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ನಡೆದಿದೆ. ಉಮಾ(29) ಹಾಗೂ ಅವರ ಒಂದು ವರ್ಷದ ಮಗ ಧನುಷ್ ಮೃತ ದುರ್ಧೈವಿಗಳು ಎನ್ನಲಾಗಿದ್ದು, ಇಂದು ಬೆಳಗ್ಗಿನ ಜಾವ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದಿದ್ದು, ಈ ವೇಳೆ ಗಂಭಿರವಾಗಿ ಗಾಯಗೊಂಡಿದ್ದ ತಾಯಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲೇ ತಾಯಿ ಮಗು ಇಬ್ಬರು ಮೃತಪಟ್ಟಿದ್ದು, ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.