ಮಳೆಯಿಂದ ಒದ್ದೆಯಾದ ಮೈದಾನ ಒಣಗಿಸಲು ಹೇರ್ ಡ್ರೈಯರ್, ಐರನ್ ಬಾಕ್ಸ್ ಬಳಸಿ ಟೀಕೆಗೆ ಗುರಿಯಾದ ಬಿಸಿಸಿಐ…

247
firstsuddi

ಗುವಾಹಟಿ : ನಿನ್ನೆ ಬಾರಾಬತಿ ಕ್ರೀಡಾಂಗಣದಲ್ಲಿ ಮಳೆಯಿಂದ ಒದ್ದೆಯಾಗಿದ್ದ ಮೈದಾನವನ್ನು ಒಣಗಿಸಲು ಹೇರ್ ಡ್ರೈಯರ್ ಹಾಗೂ ಐರನ್ ಬಾಕ್ಸ್ ಬಳಸಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಈ ವೇಳೆ ಮೈದಾನ ಒದ್ದೆಯಾಗಿದ್ದ ಕಾರಣ ನಿರ್ಣಯಕಾರರು ಪಂದ್ಯವನ್ನು ರದ್ದುಗೊಳಿಸಿದರು. ಮಳೆಯಿಂದ ಒದ್ದೆಯಾಗಿದ್ದ ಪಿಚ್ ಒಣಗಿಸಲು ಸಿಬ್ಬಂದಿಗಳು ಹೇರ್ ಡ್ರೈಯರ್ ಹಾಗೂ ಐರನ್ ಬಾಕ್ಸ್ ನ್ನು ಬಳಸಿದ್ದು, ಈಗಾ ತೀವ್ರ ಟೀಕೆಗೆ ಗುರಿಯಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಹೇರ್ ಡ್ರೈಯರ್ ಬಳಸಿದ್ದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮಾಡಿ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.