ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಸಂಜಯ್ ರಾವತ್‍.

67
firstsuddi

ಮುಂಬೈ : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ ವಿಧಾನಸಭೆಯನ್ನು ವಿಸರ್ಜನೆ ಮಾಡುವ ಬಗ್ಗೆ ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್‍ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಏಕನಾಥ್ ಶಿಂಧೆ ಜೊತೆ ಇಂದು ಬೆಳಗ್ಗೆ ಮಾತನಾಡಿದೆ. ಯಾರೆಲ್ಲಾ ಹೊರಗೆ ಹೋಗಿದ್ದಾರೋ ಅವರೆಲ್ಲಾ ಶಿವಸೇನೆಯ ಸೈನಿಕರು. ಅವರೆಲ್ಲ ಶಿವಸೇನೆ ಜೊತೆ ಉಳಿಯಲು ಬಯಸುತ್ತಾರೆ. ನಮ್ಮಲ್ಲಿ ಕೆಲವು ತಪ್ಪು ತಿಳುವಳಿಕೆಯಿಂದ ಸರ್ಕಾರದಲ್ಲಿ ಹೀಗೆ ಆಗಿರಬಹುದು. ಇದಕ್ಕೂ ಮೇಲಾಗಿ ಶಿಂಧೆ ನನ್ನ ಬಳಿ ಯಾವುದೇ ಬೇಡಿಕೆಯನ್ನ ಇಟ್ಟಿಲ್ಲ. ನಮ್ಮ ಪಕ್ಷ ಸತತ ಹೋರಾಟ ಮಾಡುತ್ತೆ. ಹೆಚ್ಚೆಂದರೆ ಅಧಿಕಾರ ಕಳೆದುಕೊಳ್ಳಬಹುದು ಆದರೆ ಹೋರಾಟ ಮುಂದುವರಿಸುತ್ತೇವೆ ಎಂದಿದ್ದರು.