ಮಹಿಳಾ ವಿಶ್ವಕಪ್ ಕ್ರಿಕೆಟ್ : ವೆಸ್ಟ್ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ.

123
firstsuddi

ವೆಲ್ಲಿಂಗ್ಟನ್ : ಮಹಿಳಾ ವಿಶ್ವಕಪ್ ನ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 155 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತದ ವನಿತೆಯರು ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದರು. ಟೀಂ ಇಂಡಿಯಾ ನೀಡಿದ 317 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ಬ್ಯಾಟರ್ ಗಳು 162 ರನ್ ಗಳಿಗೆ ಸರ್ವಪನತ ಕಂಡು ಸೋಲೊಪ್ಪಿಕೊಂಡರು.

ಭಾರತ ತಂಡದ ಪರ : ಸ್ಮೃತಿ ಮಂದಾನ 123 ರನ್, ಹರ್ಮನ್ಪ್ರೀತ್ ಕೌರ್ 109 ರನ್, ಯಸ್ತಿಕಾ ಬಾಟಿಯಾ 31 ರನ್, ನಾಯಕಿ ಮಿಥಾಲಿ ರಾಜ್ 5 ರನ್, ದೀಪ್ತಿ ಶರ್ಮಾ 15 ರನ್, ಪೂಜಾ ವಾಸ್ತ್ರಾಕರ್ 10 ರನ್, ಗೋಸ್ವಾಮಿ 2 ರನ್, ಸ್ನೇಹಾ ರಾಣಾ 2 ರನ್ ಮತ್ತು ಮೇಘನಾ ಸಿಂಗ್ 1 ರನ್ ಕಲೆ ಹಾಕಿದರು.

ವೆಸ್ಟ್ಇಂಡೀಸ್ ಪರ : ಡಿಯಾಂಡ್ರಾ ಡಾಟಿನ್ 62 ರನ್, ಹೇಲಿ ಮ್ಯಾಥ್ಯೂಸ್ 43 ರನ್, ಕಿಸಿಯಾ ನೈಟ್ 5 ರನ್, ನಾಯಕಿ ಸ್ಟಾಫನಿ ಟೇಲರ್ 1 ರನ್, ಶೆಮೈನ್ ಕ್ಯಾಂಪ್ಬೆಲ್ಲೆ 11 ರನ್, ಚೆಡಿಯನ್ ನೇಷನ್ 19 ರನ್, ಚಿನೆಲ್ಲೆ ಹೆನ್ರಿ 7 ರನ್, ಆಲಿಯಾ ಅಲೀನ್ 4 ರನ್, ಶಾಮಿಲಿಯಾ ಕಾನ್ನೆಲ್ 0, ಅನಿಸಾ ಮೊಹಮ್ಮದ್ 2, ಶಕೆರಾ ಸೆಲ್ಮನ್ 7 ರನ್ ಕಲೆ ಹಾಕಿದರು.