ಬೆಂಗಳೂರು : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಅವರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಕಳೆದ ಒಂದು ವಾರದಿಂದ ದೇವೇಗೌಡರಿಗೆ ಕೆಮ್ಮು ಕಾಣಿಸಿಕೊಂಡ ಹಿನ್ನಲೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್ ನಲ್ಲಿ ನೆಗಟಿವ್ ವರದಿ ಬಂದಿತ್ತು. ಬಳಿಕ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಈ ವೇಳೆ ದೇವೇಗೌಡರಿಗೆ ಕೊರೊನಾ ತಗಲಿರುವುದು ದೃಢವಾಗಿದೆ. ಪಾಸಿಟಿವ್ ರಿಪೋರ್ಟ್ ನ ನಂತರ ಇಬ್ಬರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್.ಡಿ. ದೇವೇಗೌಡ ಅವರು ನನಗೂ ಹಾಗೂ ನನ್ನ ದಂಪತಿಗೆ ಕೊರೊನಾ ಸೋಂಕು ತಗಲಿರುವುದು ದೃಢವಾಗಿದೆ. ನನ್ನ ಸಂಪರ್ಕಕ್ಕೆ ಬಂದವರು ಆದಷ್ಟು ಬೇಗ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
My wife Chennamma and I have tested positive for COVID-19. We are self-isolating along with other family members.
I request all those who came in contact with us over the last few days to get themselves tested. I request party workers and well-wishers not to panic.— H D Devegowda (@H_D_Devegowda) March 31, 2021
ಇನ್ನು ಹೆಚ್.ಡಿ. ದೇವೇಗೌಡ ದಂಪತಿಗೆ ಸೋಂಕು ತಗಲಿರುವ ವಿಷಯ ತಿಳಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಸುಧಾಕರ್, ಡಿಕೆಶಿ, ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ಬೇಗ ಗುಣಮುಖರಾಗಲೀ ಎಂದು ಹಾರೈಸಿದ್ದಾರೆ.










