ಮುಂದಿನ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋತರೆ ಒಂದೊಂದು ಕುಕ್ಕರ್ ಕೊಡುತ್ತೇನೆ : ರಮೇಶ್ ಜಾರಕಿಹೊಳಿ

314
firstsuddi

ಬೆಳಗಾವಿ : ಮುಂದಿನ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋತರೆ ನಿಮಗೆಲ್ಲಾ ಒಂದೊಂದು ಕುಕ್ಕರ್ ಕೊಡುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ಮುಖಂಡರೊಂದಿಗೆ ಸಭೆ ನಡೆಸಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವಂತೆ ಹೇಳಿದ್ದೇ ನನ್ನ ತಪ್ಪಾಯ್ತು. ಒಳ್ಳೆಯ ಸಂಸ್ಕøತಿಯ ಹೆಣ್ಣು ಮಗಳು ಎಂದು ನಾನು ಗೆಲ್ಲಿಸಿದೆ. ಅವರನ್ನು ಗೆಲ್ಲಿಸಿದ ತಪ್ಪಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ನು ಮುಂದೆ ಈ ರೀತಿಯಾಗಬಾರದು. ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿ ಭಾಷಿಕರ ಹಕ್ಕು. ಮುಂದಿನ ಚುನಾವಣೆಯಲ್ಲಿ ಮರಾಠಿ ಸಮುದಾಯದವರು ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಯಾರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೋ ಅವರ ಪರ ನಾನು ನಿಲ್ಲುತ್ತೇನೆ. ಅಲ್ಲದೇ ನನ್ನ ಕಡೆಯಿಂದ ಎಲೆಕ್ಷನ್ ಫಂಡ್ 5ಕೋಟಿ ಕೊಡುತ್ತೇನೆ. ಉಳಿದ ಸಮುದಾಯದ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನನ್ನದು. ಕಾರ್ಯಕರ್ತರು ಗಟ್ಟಿಯಾಗಿದ್ದರೆ ಯಾವುದು ಅಸಾಧ್ಯವಲ್ಲ ಎಂದರು.