ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಯ ನಡುವೆಯೂ ವಿಧಾನಮಂಡಲದವರ ಸಂಬಳ, ನಿವೃತ್ತಿ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿದೆ. ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ ಹೆಚ್ಚಳ ಆಗಿದೆ.
ಗದ್ದಲದ ನಡುವೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮುಖ್ಯಮಂತ್ರಿಗಳ ಪರವಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ ) ವಿಧೇಯಕ- 2022 ಅನ್ನು ಮಂಡಿಸಿದರು.
ಮುಖ್ಯಮಂತ್ರಿ, ಸಚಿವರಿಗೆ ಸಂಬಳ ಎಷ್ಟು ಹೆಚ್ಚಳ..?
• ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50%ರಷ್ಟು ಹೆಚ್ಚಳ
• ಸಿಎಂಗೆ ಪ್ರತಿ ತಿಂಗಳು ಇದ್ದ 50ಸಾವಿರ ಸಂಬಳ 75 ಸಾವಿರಕ್ಕೆ ಹೆಚ್ಚಳ
• ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ 40ಸಾವಿರ ಇದ್ದ ಸಂಬಳ 60 ಸಾವಿರ ರೂ.ಗಳಿಗೆ ಹೆಚ್ಚಳ
• ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಆತಿಥ್ಯ ಭತ್ಯೆ 3ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ
• ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ
• ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರದಿಂದ 30ಸಾವಿರಕ್ಕೆ ಹೆಚ್ಚಳ
• ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್ ಲೀಟರ್ ನಿಂದ 2ಸಾವಿರ ಲೀಟರ್ ಪೆಟ್ರೋಲ್ ಗೆ ಹೆಚ್ಚಳ
ಸಭಾಧ್ಯಕ್ಷರು/ ಉಪಸಭಾಧ್ಯಕ್ಷ ಸಂಬಳ, ಭತ್ಯೆ:
• ಸಂಬಳ: 50,000 ದಿಂದ 75,000 ರೂ.
• ಆತಿಥ್ಯ ವೇತನ ವಾರ್ಷಿಕ: 3,00,000 ದಿಂದ 4,00,000 ರೂ.
• ಮನೆ ಬಾಡಿಗೆ: 80,000 ರಿಂದ 1,60,000 ರೂ.
• ಇಂಧನ: 1000 ಲೀಟರ್ ರಿಂದ 2000 ಲೀಟರ್.
• ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ 30 ರಿಂದ 40 ರೂ.
• ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000 ದಿಂದ 3000 ರೂ.
ಶಾಸಕರ ಭತ್ಯೆ:
• ಸಂಬಳ: 20,000 ದಿಂದ 40,000 ರೂ.
• ಕ್ಷೇತ್ರದ ಭತ್ಯೆ: 40,000 ರಿಂದ 60000 ರೂ.
• ಆತಿಥ್ಯ ವೇತನ (ವಾರ್ಷಿಕ): 2,00,000 ದಿಂದ 2,50,000 ರೂ.
• ಇಂಧನ: 1000 ಲೀಟರ್ ರಿಂದ 2000 ಲೀಟರ್.
• ಪ್ರಯಾಣ ಭತ್ಯೆ: (ಪ್ರತಿ ಕಿಲೋಮೀಟರ್) 25 ರಿಂದ 30 ರೂ.
• ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000 ದಿಂದ 2500 ರೂ.
• ಹೊರ ರಾಜ್ಯ ಪ್ರವಾಸ: 5000 ದಿಂದ 7000 ರೂ.
• ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ 20,000 ರೂ. ಕಾಯ್ದಿರಿಸಲಾಗಿದೆ.
• ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರಿಂದ 20,000 ರೂ.ಗೆ ಹೆಚ್ಚಳ
ವಿಪಕ್ಷ ನಾಯಕರ ಸಂಬಳ, ಭತ್ಯೆ
• ಸಂಬಳ: 40,000 ದಿಂದ 60,000 ರೂ.
• ಆತಿಥ್ಯ ವೇತನ ವಾರ್ಷಿಕ: 2,00,000 ದಿಂದ 2,50,000 ರೂ.
• ಇಂಧನ: 1000 ಲೀಟರ್ ರಿಂದ 2000 ಲೀಟರ್.
• ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30 ರೂ.
• ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000 ದಿಂದ 3000 ರೂ.
• ಹೊರ ರಾಜ್ಯ ಪ್ರವಾಸ: 5000 ದಿಂದ 7000 ರೂ.










