ಕೊಟ್ಟಿಗೆಹಾರ: ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದ್ಯೊಯುವ ವೇಳೆ ಆಂಬುಲೆನ್ಸ್ ನಲ್ಲೆ ಹೆರಿಗೆಯಾದ ಘಟನೆ ಇಂದು ಸಂಜೆ ನಡೆದಿದೆ.
ಬಣಕಲ್ ಗ್ರಾ.ಪಂ ವ್ಯಾಪ್ತಿಯ ಮತ್ತಿಕಟ್ಟೆಯ ಕಾಫಿತೋಟವೊಂದರಲ್ಲಿ ಕಾರ್ಮಿಕರಾಗಿದ್ದ ಅಸ್ಸಾಂ ಮೂಲದ ಫಾತಿಮಾ ಎಂಬುವವರಿಗೆ ಸಂಜೆ ಹೆರಿಗೆನೋವು ಕಾಣಿಸಿಕೊಂಡಿದ್ದು, ಸಮಾಜಸೇವಕ ಆರೀಪ್ ಅವರು ಫಾತಿಮಾ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗ ಮಧ್ಯದಲ್ಲೆ ಆಂಬುಲೆನ್ಸ್ ನಲ್ಲಿ ಹೆರಿಗೆಯಾಗಿದೆ.
ಮಹಿಳೆ ಮತ್ತು ಮಗುವನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.










