ಮೂಡಿಗೆರೆ :ಕಡಿದಾಳು ಗ್ರಾಮದ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ..

101

ಮೂಡಿಗೆರೆ :ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ…ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಧ್ವನಿ ಸಂಘಟನೆಯ ಮುಖಂಡ ಸಂಜಯ್ ಕಡಿದಾಳ್ ದಾರದಹಳ್ಳಿ ಕೂಡು ರಸ್ತೆಯಿಂದ 500 ಮೀಟರ್ ಕಾಂಕ್ರೆಟ್ ರಸ್ತೆಯಿದ್ದು ಅಲ್ಲಿಂದ ಸುಮಾರು ಎರಡು ಕಿಲೋಮೀಟರ್ ಇದ್ದ ಡಾಂಬರ ರಸ್ತೆ ಕಿತ್ತು ಹೋಗಿದ್ದು ದೊಡ್ಡ ದೊಡ್ಡ ಗುಂಡಿಯಾಗಿದ್ದು ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದ್ದು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಗ್ರಾಮಸ್ಥರಾದ ದೀಪಕ್ ಗೌಡ ಮಾತನಾಡಿ ನಮ್ಮ ರಸ್ತೆ ಡಾಂಬರೀಕರಣ ಕಂಡು 20 ವರ್ಷ ಕಳೆದಿವೆ.ಇದರಿಂದ ರಸ್ತೆ ಹಾಳಾಗಿದ್ದು ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ದ್ವಿಚಕ್ರ ವಾಹನ ಸವಾರರು ಹರಾಸಾಹಸ ಪಡುವಂತಾಗಿದೆ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಜನಪ್ರತಿನಿದಿಗಳಿಗೆ ಹಿಡಿಶಾಪ ಹಾಕುತ್ತ ತೀರಾಗಡುತ್ತಿದ್ದೂ ಗುಂಡಿ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ಲೆಕ್ಕವಿಲ್ಲದಷ್ಟು ಬಾರಿ ಬಿದ್ದು ಗಾಯಗೊಂಡಿದ್ದಾರೆ. ಹೀಗಿದ್ದರೂ ರಸ್ತೆ ದುರಸ್ತಿಗೊಳಿಸುವ ಕೆಲಸ ಆಗಿಲ್ಲ ಎಂದರು.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಶಾಸಕರದ ನಯನ ಮೋಟಮ್ಮನವರು ನಮ್ಮೂರ ರಸ್ತೆಗೆ ಬಂದು ನೋಡಿ ಇದರ ಬಗ್ಗೆ ಗಮನ ಹರಿಸಿ ಶೀಘ್ರ ರಸ್ತೆ ದುರಸ್ತಿ ಪಡಿಸಬೇಕು ಎಂಬುದು ಗ್ರಾಮಸ್ಥರ ಅಗ್ರಹವಾಗಿದೆ.