ಕೊಟ್ಟಿಗೆಹಾರ : ಹಳ್ಳಿಬೈಲ್ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಮಾಡುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗ್ರಾಮದ ಗದ್ದೆಯೊಂದರ ನಡುವೆ ಇದ್ದು ಮಳೆಗಾಲದಲ್ಲಿ ಸಮೀಪದಲ್ಲೆ ಇರುವ ನದಿ ತುಂಬಿ ಗದ್ದೆಯ ಮೇಲೆ ಹರಿಯುವಾಗ ಟ್ರಾನ್ಸ್ ಫಾರ್ಮರ್ ಮುಳುಗಡೆಯಾಗುವುದರಿಂದ ಮಳೆಗಾಲದಲ್ಲಿ ವಿದ್ಯುತ್ ಆಗಾಗ ಕೈಕೊಡುತ್ತಿದ್ದು ಟ್ರಾನ್ಸ್ ಫಾರ್ಮರ್ ಸ್ಥಳಾಂತರ ಮಾಡಬೇಕು ಎಂದು ಹಳ್ಳಿಬೈಲ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥ ವಿನಯ್ ಮಾತನಾಡಿ, ಪ್ರಸ್ತುತ ಈಗ ಟ್ರಾನ್ಸ್ ಫಾರ್ಮರ್ ಇರುವ ಕಡೆಯಲ್ಲಿ ಮಳೆಗಾಲದಲ್ಲಿ ನದಿನೀರು ಉಕ್ಕಿ ಹರಿಯುವುದರಿಂದ ಆಗಾಗ ಟ್ರಾನ್ಸ್ ಫಾರ್ಮರ್ ಹಾಳಾಗುತ್ತಿರುತ್ತದೆ. ನದಿ ತುಂಬಿ ಹರಿಯುತ್ತಿರುವುದರಿಂದ ಮೆಸ್ಕಾಂ ಸಿಬ್ಬಂದಿಗಳು ಕೂಡ ಟ್ರಾನ್ಸ್ ಫಾರ್ಮರ್ ಸರಿ ಪಡಿಸಲು ಸಾದ್ಯವಾಗುವುದಿಲ್ಲ. ಮಳೆಗಾಲದಲ್ಲಿ ತಿಂಗಳುಗಟ್ಟಲೇ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯಬೇಕಾಗಿದೆ ಎಂದರು.
ಹೆಸಗೋಡು ಗ್ರಾಮಕ್ಕೆ ಈ ಮೊದಲು ಬಣಕಲ್ ಪೀಡರ್‍ನಿಂದ ವಿದ್ಯುತ್ ಒದಗಿಸುತ್ತಿದ್ದರು. ನಂತರ ಈ ತರದ ಸಮಸ್ಯೆಯಿಂದಾಗಿ ನಂತರದ ದಿನಗಳಲ್ಲಿ ದಾರದಹಳ್ಳಿ ಫೀಡರ್‍ನಿಂದ ವಿದ್ಯುತ್ ಒದಗಿಸಲಾಗಿದೆ. ನಮ್ಮ ಗ್ರಾಮಕ್ಕೂ ಕೂಡ ಬಣಕಲ್ ಪೀಡರ್ ಬದಲಾಗಿ ದಾರದಹಳ್ಳಿ ಪೀಡರ್‍ಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಬೇಕು ಮತ್ತು ವಿದ್ಯುತ್ ಲೈನ್‍ಗಳನ್ನು ಅತಿ ಶೀಘ್ರವಾಗಿ ಸ್ಥಳಾಂತರಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಗದ್ದೆ ನಡುವೆ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಥಳಾಂತರಕ್ಕೆ ಹಳ್ಳಿಬೈಲ್ ಗ್ರಾಮಸ್ಥರ ಒತ್ತಾಯ…










