ಮೂಡಿಗೆರೆ : ಚೇತನಹಳ್ಳಿ ಎಸ್ಟೇಟ್‍ನಲ್ಲಿ ಗಂಗಯ್ಯ ಹೆಗ್ಗಡೆ ಅವರ ಅಂತ್ಯಸಂಸ್ಕಾರ…

546
firstsuddi

ಮೂಡಿಗೆರೆ : ಉದ್ಯಮಿ ದಿವಂಗತ ಸಿದ್ದಾರ್ಥ್ ಹೆಗ್ಗಡೆ ಅವರ ತಂದೆ ಗಂಗಯ್ಯ ಹೆಗ್ಗಡೆ ಅವರು ವಿಧಿವಶರಾಗಿದ್ದು, ಇಂದು ಚೇತನಹಳ್ಳಿ ಎಸ್ಟೇಟ್‍ನಲ್ಲಿ ಗಂಗಯ್ಯ ಹೆಗ್ಗಡೆ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಸಿದ್ದಾರ್ಥ್ ಹೆಗ್ಗಡೆ ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳದ ಪಕ್ಕದಲ್ಲಿಯೇ ಗಂಗಯ್ಯ ಹೆಗ್ಗಡೆ ಅವರ ಅಂತ್ಯ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. ಗಂಗಯ್ಯ ಹೆಗ್ಗಡೆ ಅವರ ಅಣ್ಣನ ಮಗ ಸೇನಾನಿ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಶಾಸಕ ಟಿ.ಡಿ. ರಾಜೇಗೌಡ, ಪ್ರಾಣೇಶ್ ಇದ್ದರು.