ಮೂಡಿಗೆರೆ : ನಳಂದಾ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ…

602
firstsuddi

ಮೂಡಿಗೆರೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಳಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಯೋಗ ದಿನಾಚರಣೆ ಆಚರಿಸಲಾಯಿತು. ಸರ್ವೋತ್ತಮ ಪ್ರಶಸ್ತಿ ವಿಜೇತ ಕಾ.ದಾ ಕೃಷ್ಣರಾಜ್ ಅರಸ್ ಕಾರ್ಯಕ್ರಮವನ್ನು ಉದ್ಘಾಟಿಸಿ

firstsuddi

ಮಾತನಾಡಿದ ಅವರು ಯೋಗ ದಿನಾಚರಣೆ ಬಗ್ಗೆ ಹಾಗೂ ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಪ್ರಯೋಜನಕರವಾಗಿದೆ.

firstsuddi

ಮಕ್ಕಳು ಮನೆಯಲ್ಲಿ ದಿನನಿತ್ಯ ಯೋಗಭ್ಯಾಸ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷರಾದ ಯೋಗೇಶ್, ನಳಂದಾ ಶಾಲೆಯ ಮುಖ್ಯ ಉಪಧ್ಯಾಯರಾದ ಕನಗಿನಹಾಳ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಅಸ್ಮತ್ ಇರ್ಫಾನ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಗಾಯತ್ರಿ, ಸುರೇಶ್, ಗಣೇಶ್, ನಳಂದಾ ಶಾಲೆಯ ಸಿಬ್ಬಂದಿಗಳು ಇದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಅಕ್ಷತಾ ನಿರೂಪಿಸಿದರು, ಶ್ರೀಮತಿ ಅರ್ಪಿತಾ ಕಾರ್ಯಕ್ರಮ ಸ್ವಾಗತಿಸಿದರು.

firstsuddi