ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಆಚರಣೆ…

60

ಮೂಡಿಗೆರೆ :ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ಇಂದು  ಮಂಡಲ ವತಿಯಿಂದ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಣಗೆರೆ ಸುಂದರೇಶ್  ವಿಶ್ವದ ಜನಪ್ರಿಯ ನಾಯಕರಲ್ಲಿ ಅಮೆರಿಕದ ಅಧ್ಯಕ್ಷರನ್ನು ಮೀರಿಸಿರುವ ನರೇಂದ್ರ ಮೋದಿ ಅವರು ವಿಶ್ವದ ನಂ.1 ನಾಯಕರಾಗಿದ್ದಾರೆ. ಬಡವರ,ರೈತರ, ಮಹಿಳೆಯರ, ಕ್ಷೇಮ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿರುವ
ನರೇಂದ್ರ ಮೋದಿಜಿ ದೇಶದ ಪ್ರಧಾನಿಯಾಗಿ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಮಂಡಲದ ವತಿಯಿಂದ ತಾಲೂಕಿನ ಎಲ್ಲಾ ಜನತೆಯು ನರೇಂದ್ರ ಮೋದಿಜಿ ಅವರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರಾದ  ದೀಪಕ್ ದೊಡ್ಡಯ್ಯ ಪಕ್ಷಕ್ಕಾಗಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿ ಕೆಲಸ ಮಾಡುತ್ತಿರುವ ಪ್ರಧಾನಿಯವರ ದಾರಿಯಲ್ಲೇ ನಾವೆಲ್ಲರೂ ಸಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪರೀಕ್ಷಿತ್ ಜಾವಳಿ, ಪಂಚಾಕ್ಷರಿ ಹಾಲೂರು, ಪ್ರಶಾಂತ್ ಬಿಳುಗುಳ, ಸಂಜಯ್ ಕಡಿದಾಳ್, ಬಾಳೂರು ಹೋಬಳಿ ಅಧ್ಯಕ್ಷ ಮಂಜುನಾಥ್, ಕಸಬಾ ಅಧ್ಯಕ್ಷ ಸಂದೀಪ್,ನಗರ ಅಧ್ಯಕ್ಷ ರಂಗನಾಥ್,ಗೋಣಿಬೀಡು ಅಧ್ಯಕ್ಷ ಭರತ್, ಮರ್ಕಲ್ ಲೋಕೇಶ್, ಮೋಹನ್ ಬೆಟ್ಟಗೆರೆ,ಶಶಿ ಕೆಲ್ಲೂರು,ರವಿ ಒಡೆಯರ್, ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್, ಇನ್ನು ಹಲವರು ಉಪಸ್ಥಿತರಿದ್ದರು