ಮೂಡಿಗೆರೆ : ಮುಖ್ಯಮಂತ್ರಿಗಳಿಗೆ ನಮ್ಮ ಬಾಳೂರು ಹೋಬಳಿ ಕಷ್ಟ ಅರ್ಥವಾಗುತ್ತಿಲ್ಲ : ಆದರ್ಶ್.

915
firstsuddi

ಮೂಡಿಗೆರೆ : ತಾಲೂಕಿನ ಮಲೆಮನೆ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಐದು ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ವು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಸಂತ್ರಸ್ಥರು ಕೈ ಮುಗಿದು ಕಣ್ಣೀರಿಟ್ಟಾಗ. ಜಿಲ್ಲಾಧಿಕಾರಿಗೆ ವರದಿ ತಯಾರಿಸಿಕೊಂಡು ಬೆಂಗಳೂರಿಗೆ ಬರಲು ಹೇಳಿದ್ದೇನೆ.
ನೆಮ್ಮದಿಯಿಂದ ಬದುಕಲು ವ್ಯವಸ್ಥೆ ಮಾಡುತ್ತೇವೆ ಪುನರ್ ವಸತಿ ಕಲ್ಪಿಸೋಕೆ ಯೋಚನೆ ಮಾಡುತ್ತಿದ್ದೇವೆ ಜಮೀನು ಹಾಗೂ ವಸತಿ ಎಲ್ಲಿ ಕಲ್ಪಿಸಬೇಕೆಂದು ಯೋಚನೆ ಮಾಡುತ್ತಿದ್ದೇವೆ.  ತಕ್ಷಣಕ್ಕೆ ಏನು ಪರಿಹಾರ ಮಾಡಬೇಕು ಅದನ್ನ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದೆ ಗೊತ್ತೆ ಸಿಗದ ರೀತಿಯಲ್ಲಿ ಕಾಫಿ, ಅಡಿಕೆ ತೋಟ ಹಾನಿಯಾಗಿದೆ. ನೂರಾರು ಮನೆಗಳು ಹಾನಿಯಾಗಿದ್ದು, ಮೊದಲು ಜನರ ಬದುಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಆ ಕೆಲಸ ಮೊದಲು ಮಾಡಬೇಕಿದೆ ಎಂದು ದೌಡಾಯಿಸಿದರು. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಬಾಳೂರು ಆದರ್ಶ್ ಅವರು ಮುಖ್ಯಮಂತ್ರಿಗಳ ಈ ವರ್ತನೆಯಿಂದ ಪ್ರಧಾನಿಮಂತ್ರಿಗಳಿಗಾದರು ಬಡವರ ಕಷ್ಟ ಅರ್ಥವಾಗುತ್ತೆ ಆದರೆ ಮುಖ್ಯಮಂತ್ರಿಗಳಿಗೆ ನಮ್ಮ ಕಷ್ಟ ಅರ್ಥ ಆಗುತ್ತಿಲ್ಲ. ಬರೀ ಕುರ್ಚಿಯೊಂದು ಉಳಿದರೆ ಸಾಕು ಎಂದು ಹೋದಪುಟ್ಟ ಬಂದ ಪುಟ್ಟ ಕೆಲಸಮಾಡುವ ಬದಲು ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುವ ಬದಲು ಟಿವಿ ಮತ್ತು ಪತ್ರಕರ್ತರ ಮುಂದೆ ಶೋ ಕೊಡುತ್ತಿರುವುದು ಸರಿಯಲ್ಲಾ ಎಂದು ಸಾರ್ವಜನಿಕರ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ ಎಂದರು.