ಮೂಡಿಗೆರೆ : ತಾಲ್ಲೂಕಿನ ಹೊರನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಧಿಸಿದಂತೆ ಪ್ರತಿಕ್ರಯಿಸಿದ್ದು, ಪಾಪ, ಯಡಿಯೂರಪ್ಪ ಅವರು ನನ್ನನ್ನು ಹೆಣೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅವರ ಆಸೆಗೆ ನಾನೇಕೆ ತಣ್ಣೀರು ಎರಚಲಿ? ಧಾರಾಳವಾಗಿ ಸಿಬಿಐ ತನಿಖೆಗೆ ಕೊಡಲಿ, ಯಾವಾ ತನಿಖೆ ಬೇಕಾದರೂ ಮಾಡಿಕೊಳ್ಳಲಿ. ನನ್ನ ಆತ್ಮ ಸಾಕ್ಷಿಗೆ ತಕ್ಕನಾಗಿ ನಾನು ಕೆಲಸ ಮಾಡಿದ್ದೇನೆ. ನಾನು ತಪ್ಪು ಮಾಡಿದರೆ ಹೆದರಬೇಕು, ತಪ್ಪು ಮಾಡಿಲ್ಲ ಎಂದರೆ ಯಾಕೆ ಹೆದರಲಿ? ಬಿಜೆಪಿಯವರ ಆಪರೇಷನ್ ಕಮಲದಲ್ಲಿ ನಡೆದಿರುವ ಷಡ್ಯಂತ್ರದ ಬಗ್ಗೆಯೂ ತನಿಖೆಯಾಗಲಿ. ಆಪರೇಷನ್ ಕಮಲಕ್ಕೆ ಯಾವ ಪಾಪದ ಹಣ ಬಳಸಿದ್ರು? ಆಪರೇಷನ್ ಕಮಲದ ಬಗ್ಗೆಯೂ ಸತ್ಯಾಸತ್ಯತೆ ಜನತೆಗೆ ತಿಳಿಯಲಿ ಎಂದರು.










