ಕೊಟ್ಟಿಗೆಹಾರ: ಬಾಳೂರು ಗ್ರಾ.ಪಂ ವ್ಯಾಪ್ತಿಯ ಬಾಳೂರಿನಿಂದ ಬಾಳೂರು ಹೊರಟ್ಟಿಗೆ ಸಾಗುವ ರಸ್ತೆಯ ಕೋಲಂಥಿ ಎಂಬಲ್ಲಿ ವಿದ್ಯುತ್ ಕಂಬ ಶಿಥಿಲಗೊಂಡು ರಸ್ತೆಗೆ ವಿದ್ಯುತ್ ತಂತಿ ಬಾಗಿದ್ದು ಅಪಾಯ ಆಹ್ವಾನಿಸುವಂತಿದೆ.
ಇಂದು ಮದ್ಯಾಹ್ನ ಕೆಳ್ಳಳ್ಳಿ ಗ್ರಾಮಸ್ಥರು ವಾಹನವೊಂದರಲ್ಲಿ ಸೌದೆ ತುಂಬಿಸಿಕೊಂಡು ಬರುವಾಗ ವಾಹನಕ್ಕೆ ವಿದ್ಯುತ್ ತಂತಿ ತಾಗಿ ವಿದ್ಯುತ್ ಸ್ಪರ್ಶಿಸಿದ್ದು ಕೂಡಲೇ ವಾಹನ ಸವಾರರು ವಾಹನದಿಂದ ಹೊರ ನಗೆದಿದ್ದುರಿಂದ ಪ್ರಾಣಾಪಾಯ ಸಂಭವಿಸುವುದು ತಪ್ಪಿದಂತಾಗಿದೆ.
ಬಾಳೂರು ಹಳ್ಳಿಕೆರೆ ಗ್ರಾಮಸ್ಥ ಸಂದೀಪ್ ಮಾತನಾಡಿ ರಸ್ತೆಗೆ ವಿದ್ಯುತ್ ತಂತಿ ಬಾಗಿದ್ದು ವಿದ್ಯುತ್ ಕಂಬವೂ ಶಿಥಿಲಗೊಂಡಿದೆ. ಹಲವು ಬಾರಿ ವಿದ್ಯುತ್ ಕಂಬ ಬದಲಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾಳೂರು ಗ್ರಾ.ಪಂಯಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಮೆಸ್ಕಾಂ ಅಧಿಕಾರಿಗಳು ಶಿಥಿಲಗೊಂಡ ಕಂಬವನ್ನು ಬದಲಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಬಾಳೂರು ಗ್ರಾಮಸ್ಥ ಸುಧಾಕರ್ ಶೆಟ್ಟಿ ಮಾತನಾಡಿ, ವಿದ್ಯುತ್ ತಂತಿ ರಸ್ತೆಗೆ ಬಾಗಿರುವುದರಿಂದ ಹಲವಾರು ವಾಹನ ಸವಾರರಿಗೆ ವಿದ್ಯುತ್ ಸ್ಪರ್ಶಿಸಿದ ಅನುಭವವಾಗಿದೆ. ಮೆಸ್ಕಾಂ ಅಧಿಕಾರಿಗಳು ಪ್ರಾಣಾಪಾಯ ಸಂಭವಿಸುವ ಮುನ್ನ ವಿದ್ಯುತ್ ಕಂಬ ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೆಸ್ಕಾಂನ ಹಿರಿಯ ಅಭಿಯಂತರರಾದ ಶಿವಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ ವಿದ್ಯುತ್ ಕಂಬ ಶಿಥಿಲಗೊಂಡಿರುವ ಮಾಹಿತಿ ಬಂದಿದ್ದು ಕೂಡಲೇ ವಿದ್ಯುತ್ ಕಂಬ ಬದಲಿಸಲಾಗುವುದು ಎಂದು ತಿಳಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಶಿಥಿಲಗೊಂಡಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಬಾಳೂರು ಗ್ರಾಮಸ್ಥರ ಆಗ್ರಹ…










