ಮೂಡಿಗೆರೆ : ಹೃದಯಾಘಾತದಿಂದ ನಿಧನರಾದ ರವಿ ಬೆಳಗೆರೆ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ…

432
firstsuddi

ಕೊಟ್ಟಿಗೆಹಾರ : ಖ್ಯಾತ ಪರ್ತಕರ್ತ, ಬರಹಗಾರ ರವಿ ಬೆಳಗೆರೆ ಅವರು ಪತ್ರಿಕೋದ್ಯಮದ ಉಕ್ಕಿನ ಮನುಷ್ಯ. ನಿಷ್ಟುರವಾಗಿ ಬರೆಯುತ್ತಿದ್ದ ಅವರಂತಹ ಪತ್ರಕರ್ತರು ಈ ಕಾಲದ ಅಗತ್ಯ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು
ಕೊಟ್ಟಿಗೆಹಾರದಲ್ಲಿ ಮೂಡಿಗೆರೆ ಹಾಗೂ ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರ ಸಂಘ, ಮಲ್ನಾಡ್ ಗಲ್ಫ್ ಅಸೋಸಿಯೇಷನ್, ಕೊಟ್ಟಿಗೆಹಾರ ಗೆಳೆಯರ ಬಳಗ, ತಾಲ್ಲೂಕು ಕನ್ನಡ ಜಾನಪದ ಪರಿಷತ್ ವತಿಯಿಂದ ನಡೆದ ಪರ್ತಕರ್ತ ರವಿ ಬೆಳೆಗರೆ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಓರೆಕೋರೆಗಳನ್ನು ತಮ್ಮ ವಸ್ತುನಿಷ್ಟ ವರದಿಗಳಿಂದ ತಿದ್ದುವ ಕಾರ್ಯವನ್ನು ರವಿ ಬೆಳೆಗೆರೆ ಅವರು ಮಾಡಿದ್ದಾರೆ. ನಿಷ್ಟುರವಾದ ವರದಿ ಮಾಡುತ್ತಿದ್ದಕಾರಣಕ್ಕಾಗಿ ಅನೇಕರ ವಿರೋಧವನ್ನು ಅವರು ಕಟ್ಟಿಕೊಂಡಿದ್ದರು. ಯಾರ ಪರವೂ ನಿಲ್ಲದೆ ನಿಷ್ಟುರವಾಗಿ ಬರೆಯುತ್ತಿದ್ದ ಅವರು ಅನೇಕ ಪತ್ರಿಕೋದ್ಯಮಕ್ಕೆ ಬರುವ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು ಎಂದರು.
ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ ಮಾತನಾಡಿ ಕಥೆ ಕಾದಂಬರಿ ಅಂಕಣ ಬರಹದ ಮೂಲಕ ಅಪಾರ ಓದುಗರನ್ನು ಹೊಂದಿದ್ದ ರವಿ ಬೆಳಗೆರೆ ಅವರ ನಿಧನ ತುಂಬಲಾರದ ನಷ್ಟ. ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ರವಿ ಬೆಳೆಗೆರೆ ಬರಹಗಳು ಈದುಗರಿಗೆ ಪ್ರೇರಕಶಕ್ತಿಯಾಗಿದ್ದವು ಎಂದರು.
ಗೆಳೆಯರ ಬಳಗದ ಉಪಾಧ್ಯಕ್ಷ ಸಂಜಯಗೌಡ ಮಾತನಾಡಿ ಹಾಯ್ ಬೆಂಗಳೂರು, ಓ ಮನಸೆಯಂತಹ ಪತ್ರಿಕೆಗಳ ಮೂಲಕ ಅಪಾರ ಹೊಸ ಓದುಗ ಬಳಗವನ್ನು ಬೆಳೆಸಿದವರು ರವಿ ಬೆಳೆಗೆರೆ ಅವರು. ಅವರ ಬರಹ ಪ್ರಭಾವಕ್ಕೆ ಒಳಗಾಗಿ ಅನೇಕರು ಪತ್ರಿಕೋದ್ಯಮಕ್ಕೆ ಬಂದಿದ್ದಾರೆ ಎಂದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಬಕ್ಕಿ ಮಂಜುನಾಥ್ ಮಾತನಾಡಿ ವೈವಿದ್ಯಮಯ ವ್ಯಕ್ತಿತ್ವ ಹೊಂದಿದ್ದ ರವಿ ಬೆಳೆಗೆರೆ ಅವರು ಪತ್ರಕರ್ತ ಮಾತ್ರವಲ್ಲದೆ ಜನಪ್ರಿಯ ನಿರೂಪಕನಾಗಿ, ನಟನಾಗಿ ತಾವು ಕಾಲಿಟ್ಟ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳಾದ ಭಕ್ತೇಶ್, ಜಯಪಾಲ್, ಪರೀಕ್ಷಿತ್,ನವೀನ್ ಹಾವಳಿ,ಅಭಿ, ನಾಜೀಮ್, ಸಂತೋಷ್ ಅತ್ತಿಗೆರೆ, ನಂದೀಶ್ ಬಂಕೇನಹಳ್ಳಿ, ತನು ಕೊಟ್ಟಿಗೆಹಾರ, ಅನಿಲ್ ಮೊಂತೆರೊ ಇದ್ದರು.