ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ- ತಾಯಿ ಮತ್ತು ಮಕ್ಕಳು ಆರೋಗ್ಯ…

67
firstsuddi

ಬಾಗಲಕೋಟೆ: ಮಹಿಳೆಯೊಬ್ಬಳು ಏಕಕಾಲದಲ್ಲಿ ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಇಳಕಲ್ ನಗರದ ಎಸ್.ಎಸ್. ಕಡಪಟ್ಟಿ ಆಸ್ಪತ್ರೆಯಲ್ಲಿ ನಡೆದಿದೆ.

ನಿಂಗಮ್ಮ ಎಂಬಾಕೆಯೇ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ನಿಂಗಮ್ಮ ಮತ್ತು ಚನ್ನಬಸವ ಬೊಮ್ಮನಾಳ ಎಂಬ ದಂಪತಿಗಳಿಗೆ ತ್ರಿವಳಿ ಮಕ್ಕಳು ಜನಿಸಿದ್ದು, ದಂಪತಿ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ನವಲಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಇಳಕಲ್ ನಗರದ ಖ್ಯಾತ ವೈದ್ಯೆ ಶುಭಾರಾಣಿ ಕಡಪಟ್ಟಿಯವರು ತ್ರಿವಳಿ ಮಕ್ಕಳಿಗೆ ಹೆರಿಗೆ ಮಾಡಿಸಿದ್ದು, ಮೂರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಎರಡು ಮಕ್ಕಳು ಆರೋಗ್ಯವಾಗಿದ್ದು ಒಂದು ಮಗುವಿಗೆ ಉಸಿರಾಟ ತೊಂದರೆ ಇದ್ದು, ತಾಯಿ ಆರೋಗ್ಯದಿಂದ ಇದ್ದಾರೆ ಎಂಬುದು ತಿಳಿದು ಬಂದಿದೆ. ತ್ರಿವಳಿ ಗಂಡು ಮಕ್ಕಳ ಜನನದಿಂದ ನಿಂಗಮ್ಮ-ಚನ್ನಬಸವ ದಂಪತಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.