ಮೂರು ದಿನದಲ್ಲಿ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತೇನೆ : ಸಂದೇಶ್ ನಾಗರಾಜ್.

106
firstsuddi

ಮೈಸೂರು : ಇನ್ನೂ ಮೂರು ದಿನದಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದೇನೆ ಎಂದು ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಅಗತ್ಯ ಇದ್ದಂತೆ ಕಾಣುತ್ತಿಲ್ಲ. ಅವರ ಮಾತು, ನಡೆಯಲ್ಲಿ ಅದು ಗೊತ್ತಾಗುತ್ತಿದೆ. ಅಗತ್ಯವಿಲ್ಲದ ಕಡೆ ನಾನು ಯಾಕೆ ಇರಬೇಕು? ಕಳೆದ ಮೂರು ವರ್ಷಗಳಿಂದ ನಾನು ಮಾನಸಿಕವಾಗಿ ಬಿಜೆಪಿಯಲ್ಲೆ ಇದ್ದೇನೆ. ದೈಹಿಕವಾಗಿ ಅಷ್ಟೆ ಜೆಡಿಎಸ್ ನಲ್ಲಿದ್ದೆ. ಮೂರು ವರ್ಷದಿಂದ ನಾನು ಜೆಡಿಎಸ್ ನಾಯಕರ ಸಂರ್ಪಕದಲ್ಲಿ ಇಲ್ಲ. ನನಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ. ಬಿಜೆಪಿ ಸೇರುವ ದಿನ ನಾನು ಯಾಕೆ ಜೆಡಿಎಸ್ ಬಿಟ್ಟೆ ಎಂಬುದನ್ನು ಸುದ್ದಿಗೋಷ್ಠಿ ನಡೆಸಿ ವಿವರಿಸುತ್ತೇನೆ ಎಂದು ಹೇಳಿದರು.