ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕಿರುಕುಳ ಕೊಡುವವರಿಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಜಿ.ಪರಮೇಶ್ವರ್.

21

ಬೆಂಗಳೂರು: ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕಿರುಕುಳ ಕೊಡುವವರಿಗೆ ಕಾನೂನಿನ ಬಿಸಿ ಮುಟ್ಟಿಸಲು ಶಿಕ್ಷೆ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ಈ ಮೊದಲು ಬಿಲ್‍ನಲ್ಲಿ ಮೂರು ವರ್ಷ ಶಿಕ್ಷೆ ಇತ್ತು. ಈಗ ಅದನ್ನ ಹತ್ತು ವರ್ಷಕ್ಕೆ ಏರಿಕೆ ಮಾಡಿದ್ದೇವೆ. ದಂಡ ಕೂಡಾ 5 ಲಕ್ಷ ರೂಪಾಯಿ ಮಾಡಿದ್ದೇವೆ. ಕಿರುಕುಳ ಕೊಡುವವರಿಗೆ ಕಾನೂನಿನ ಬಿಸಿ ತಟ್ಟಬೇಕು. ಕಾಟಾಚಾರಕ್ಕೆ ಕಾನೂನು ಮಾಡಿದ್ರೆ ಇಂತಹ ಕಿರುಕುಳ ಪ್ರಕರಣ ನಿಲ್ಲೋದಿಲ್ಲ. ಇದಕ್ಕಾಗಿ ದಂಡ ಮತ್ತು ಶಿಕ್ಷೆ ಜಾಸ್ತಿ ಮಾಡಿದ್ದೇವೆ. ಇಂತಹ ಕಠಿಣ ಕಾನೂನಿಂದ ಮಾತ್ರ ಕಿರುಕುಳ ನಿಲ್ಲುತ್ತದೆ. ಆ ಉದ್ದೇಶದಿಂದ ಶಿಕ್ಷೆ ಪ್ರಮಾಣ ಜಾಸ್ತಿ ಮಾಡಿದ್ದೇವೆ ಎಂದು ತಿಳಿಸಿದರು. ರಾಜ್ಯಪಾಲರಿಗೆ ಬಿಲ್ ಕಳಿಸಿದ್ದೇವೆ. ಇವತ್ತು ಆಗುತ್ತಾ ಗೊತ್ತಿಲ್ಲ. ರಾಜ್ಯಪಾಲರು ಊರಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಅವರು ಬಂದು ನೋಡಿ ಸಹಿ ಆಗಿದೆ ಕೂಡಲೇ ಸುಗ್ರಿವಾಜ್ಞೆ ಜಾರಿ ಆಗಲಿದೆ ಎಂದು ತಿಳಿಸಿದರು.